ಬಂಟ್ವಾಳ: ಬೈಕ್ ಸವಾರನ ಮೇಲೆ ಟೆಂಪೋವೊಂದು ಹರಿದು ಸವಾರ ದಾರುಣವಾಗಿ ಮೃತಪಟ್ಟ ಘಟನೆ ಫರಂಗಿಪೇಟೆ ಸಮೀಪದ ಅರ್ಕುಳ ಎಂಬಲ್ಲಿ ಇದೀಗ ಸಂಭವಿಸಿದೆ.
ಮೃತಪಟ್ಟ ಬಾಲಕನನ್ನು ಬೆಳ್ತಂಗಡಿಯ ಮುಂಡೂರು ನಿವಾಸಿ ಶೇಖರ್ ರವರ ಪುತ್ರ ಪ್ರವೀತ್ ಕುಮಾರ್ (21) ಎಂದು ಗುರುತಿಸಲಾಗಿದೆ.
ಬಿಸಿರೋಡ್ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಸವಾರ ಅರ್ಕುಳ ಬಳಿಯಿರುವ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಬೈಕ್ ಸವಾರ ಹೈವೇ ಮಾರ್ಗಕ್ಕೆ ಬಿದ್ದಿದ್ದು ಅದೇ ಕ್ಷಣದಲ್ಲಿ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಟೆಂಪೋವೊಂದು ಬೈಕ್ ಸವಾರನ ತಲೆಯ ಮೇಲೆ ಹರಿದಿದ್ದು ಕ್ಷಣ ಮಾತ್ರದಲ್ಲೇ ಸವಾರ ದಾರುಣವಾಗಿ ಮೃತಪಟ್ಟಿದ್ದಾನೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸವಾರ.
ಘಟನೆ ಸ್ಥಳದಲ್ಲಿ ಸ್ಥಳೀಯ ಮುಸ್ಲಿಂ ಯುವಕರು ಮೃತದೇಹವನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಸ್ಥಳದಲ್ಲಿ ಅರ್ಧ ಗಂಟೆ ತನಕ ಟ್ರಾಫಿಕ್ ಜಾಮ್ ಉಂಟಾಗಿದ್ದು ಪೊಲೀಸರು ಮತ್ತು ಸ್ಥಳೀಯ ಯುವಕರ ಸಹಕಾರದಿಂದ ನಿಯಂತ್ರಿಸಲಾಯಿತು.