ಉಪ್ಪಿನಂಗಡಿ: ಆಕ್ಟಿವಾ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಆಕ್ಟಿವಾ ಚಾಲಕ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೇರಮೊಗರು ಎಂಬಲ್ಲಿ ಇಂದು ಮದ್ಯಾಹ್ನ ಸಂಭವಿಸಿದೆ.

ಭೀಕರ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ರವರ ಮಗ ಉಸ್ಮಾನ್ ಯಾನೆ ಚಪ್ಪಿ (24) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಉಸ್ಮಾನ್ ಪೈಂಟರ್ ಆಗಿದ್ದು ಆಕ್ಟಿವಾದಲ್ಲಿದ್ದ ಸಹ ಸವಾರ ಅಂಗಡಿಗೆ ಹೋಗಿದ್ದರಿಂದ ಆತನನ್ನು ಕಾಯುತ್ತಾ ನಿಂತಿದ್ದ ಯುವಕನಿಗೆ ಉಪ್ಪಿನಂಗಡಿ ಕಡೆಯಿಂದ ಯಮದೂತನಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ಅಪಘಾತದ ತಿವೃತೆಗೆ ಸ್ಕೂಟರ್ ಸಹಿತ ಚಾಲಕ ಪಕ್ಕದ ಚರಂಡಿಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಒಂದು ಕಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು ಎಚ್ಚರಿಕೆಯಿಂದ ಚಾಲಕರು ವಾಹನ ಚಲಾಯಿಸಬೇಕಿದೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಅಪಘಾತದ ಸುದ್ದಿಗಳು ನಿರಂತರವಾಗಿ ಕೇಳಿ ಬರುತ್ತಿದೆ.
ನಿನ್ನೆ ರಾತ್ರಿಯಷ್ಟೇ ಒಂದು ವಿದ್ಯಾರ್ಥಿನಿ ಬೈಕ್ ಅಪಘಾತಕ್ಕೆ ಬಲಿಯಾದ ಬೆನ್ನಲ್ಲೇ ಇಂದು ಪೇರಮೊಗರು ಅಪಘಾತ ಕಣ್ಣೀರು ತರಿಸುತ್ತಿದೆ.