ಉಪ್ಪಿನಂಗಡಿ:ಹಲವಾರು ಕಷ್ಟ ಕಾರ್ಪಣ್ಯಗಳಿಗೆ ನಷ್ಟ ನೋವುಗಳಿಗೆ ಪರಿಹಾರ ಕೇಂದ್ರವಾದ ಇತಿಹಾಸ ಪ್ರಸಿದ್ಧ ಮೂಡಡ್ಕ ತೆಕ್ಕಾರು ಮಖಾಮ್ ಉರೂಸ್ ಕಾರ್ಯಕ್ರಮ ಇಂದು ಜನವರಿ 28 ರಿಂದ ಫೆಬ್ರವರಿ 1 ರ ವರೆಗೆ ಅದ್ದೂರಿಯಾಗಿ ನಡೆಯಲಿದೆ.

ಜನವರಿ 28 ಮಂಗಳವಾರ ಇಂದು ರಾತ್ರಿ ಉರೂಸ್ ಕಾರ್ಯಕ್ರಮಕ್ಕೆ ದರ್ಗಾ ಸಮಿತಿ ಅಧ್ಯಕ್ಷ ಸೆಯ್ಯದ್ ಇಸ್ಮಾಯಿಲ್ ತಂಗಳ್ ಉಜಿರೆ ಚಾಲನೆ ನೀಡಲಿದ್ದಾರೆ.
ಇಂದಿನಿಂದ ಫೆಬ್ರವರಿ ಒಂದರ ವರೆಗೆ ನಡೆಯುವ ಐದು ದಿನಗಳ ಮತ ಪ್ರವಚನ ವೇದಿಕೆಯಲ್ಲಿ
ಜೈನುಲ್ ಆಬಿದೀನ್ ತಂಗಳ್ ಕೂರಿಕ್ಕುಝಿ, ಮಸ್ಹೂದ್ ತಂಗಳ್ ಕೂರತ್, ಸೆಯ್ಯದ್ ಪಾಟ್ರಕೋಡಿ ತಂಗಳ್, ಕೆ ಬಿ ಅಬ್ಬಾಸ್ ಸಹದಿ ಉಸ್ತಾದ್, ಹಂಝ ಮಿಸ್ಬಾಹಿ ಓಟಪದವು, ಮುಸ್ತಫಾ ಸಖಾಫಿ ತೆನ್ನಲ, ಹುಸೈನ್ ಮುಈನಿ ಮಾರ್ನಾಡ್, ಹೈದರ್ ಮದನಿ ಕರಾಯ,ಸ್ವಲಾಹುದ್ದಿನ್ ಸಖಾಫಿ ಮಾಡನ್ನೂರ್, ಅಶ್ರಫ್ ಸಖಾಫಿ ಮಾಡಾವು ಮತ್ತಿತ್ತರು ಬಾಗವಹಿಸಲಿದ್ದಾರೆ.
ಫೆಬ್ರವರಿ 1 ಶನಿವಾರದಂದು ಅದ್ದೂರಿಯ ಉರೂಸ್ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ ಎಂದು ಉರೂಸ್ ಸ್ವಾಗತ ಸಮಿತಿ ಪ್ರಕಟಣೆಗೆ ತಿಳಿಸಿದೆ.