ಉಪ್ಪಿನಂಗಡಿ: ಉಮ್ರಾಗೆ ತೆರಳಿದ್ದ ಉಪ್ಪಿನಂಗಡಿ ಸಮೀಪದ ತೆಕ್ಕಾರಿನ ವ್ಯಕ್ತಿ ಅನಾರೋಗ್ಯ ಹಿನ್ನಲೆ ಪವಿತ್ರ ಮಕ್ಕಾದಲ್ಲಿ ನಿಧನರಾದ ಘಟನೆ ನಿನ್ನೆ ಬುಧವಾರ ಮಕ್ಕಾದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಸಮೀಪದ ತೆಕ್ಕಾರುವಿನ ಬೈಲಮೇಲು ನಿವಾಸಿ ಇಸ್ಮಾಯಿಲ್( 55) ಗುರುತಿಸಲಾಗಿದೆ.

ಪವಿತ್ರವಾದ ಉಮ್ರಾ ಮುಗಿಸಿ ಮದೀನಾ ಕಡೆ ತೆರಳುವ ವೇಳೆ ಅನಾರೋಗ್ಯ ಸಮಸ್ಯೆ ಎದುರಾಗಿದ್ದು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಈ ಮುಂಚೆಯೂ ಪವಿತ್ರ ಉಮ್ರಾ ಯಾತ್ರೆ ತೆರಳಿದ್ದರು ಆದರೆ ಈ ಬಾರಿ ತನ್ನ ಪತ್ನಿಗಾಗಿ ಜತೆಯಾಗಿ ತೆರಳಿದ್ದರು ಮಕ್ಕಳಿಲ್ಲದ ದಂಪತಿಗಳಾಗಿದ್ದರು ಇವರು ಹಾಗಾಗಿ ಪತ್ನಿಯ ಜೊತೆ ತೆರಳಿದ್ದರು, ಅವರ ಆಸೆಯೂ ಕೂಡ ಅದೇ ಆಗಿತ್ತು ಆಸೆಯಂತೆ ಪವಿತ್ರ ಮಕ್ಕಾದಲ್ಲೇ ಕೊನೆಯುಸಿರಿಳೆದಿದ್ದಾಗಿ ಸಹೋದರ ರಝಕ್ ಸಖಾಫಿ ಡಿ ಟಿವಿ ಜೊತೆ ತಿಳಿಸಿದರು.

ಇನ್ನು ಮೃತದೇಹ ಊರಿಗೆ ಕರೆ ತರುವ ಯಾವುದೇ ಪ್ರಕ್ರಿಯೆ ಇಲ್ಲ ಅಲ್ಲೇ ದಫನ ಕಾರ್ಯ ನಡೆಯಲಿದೆ ಕೆ ಸಿ ಎಫ್ ಸಂಘಟನಾ ಕಾರ್ಯಕರ್ತರು ಸಕ್ರಿಯರಾಗಿ ಮೃತದೇಹದ ಅಂತ್ಯಕ್ರಿಯೆಗೆ ಸಹಕರಿಸುತ್ತಿದ್ದಾರೆ ನಾಳೆ ಶುಕ್ರವಾರ (21/2/24) ರಂದು ಬೆಳಿಗ್ಗೆ 6 ರ ಹೊತ್ತಿಗೆ ಜಿದ್ದಾದ ಬಾಬ್ ಮಕ್ಕಾ ಅಲ್ ಅಸದ್ ನಲ್ಲಿ ಅಂತ್ಯಕ್ರಿಯೆ ಮತ್ತು ದಫನ ಕಾರ್ಯ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮೃತರು ತಾಜುಲ್ ಉಲಮಾ ಜುಮಾ ಮಸ್ಜಿದ್ ಕೋಡಿಬೆಟ್ಟು ಬೈಲಮೇಲು ಇದರ ಉಪಾಧ್ಯಕ್ಷರಾಗಿ, ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಮೃತರ ಅಗಲುವಿಕೆಗೆ ಸುನ್ನೀ ಸಂಘ ಕುಟುಂಬ ಮತ್ತು ತಾಜುಲ್ ಉಲಮಾ ಜುಮಾ ಮಸ್ಜಿದ್ ಆಡಳಿತ ಸಮಿತಿ ತೀವ್ರ ಸಂತಾಪ ಸೂಚಿಸಿದೆ.