ಬೆಂಗಳೂರು: 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಮದ್ಯಾಹ್ನ ಹೊರ ಬೀಳಲಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅದೃಷ್ಟ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ.

ಇಂದು ಮದ್ಯಾಹ್ನ ಹೊತ್ತಿಗೆ ಮಲ್ಲೇಶ್ವರಂ ನ ಶಿಕ್ಷಣ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರು ಇದೇ ವೇಳೆ ವೆಬ್ ಸೈಟ್ ಮೂಲಕ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ.
ಪಿಯುಸಿ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಒತ್ತಿ.
www.karresults.nic.in
ಫಲಿತಾಂಶ ಚೆಕ್ ಮಾಡೋದು ಹೇಗೆ?
ಹಂತ 1: ಅಧಿಕೃತ ವೆಬ್ ಸೈಟ್ ಗೆ ಹೋಗಿ: karresults.nic.in
ಹಂತ 2: ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಸ್ಟ್ರೀಮ್ ಆಯ್ಕೆಮಾಡಿ ಮತ್ತು ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ
ಹಂತ 4: ಕರ್ನಾಟಕ 2 ನೇ ಪಿಯುಸಿ ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ
ಹಂತ 5: ಸ್ಕೋರ್ ಕಾರ್ಡ್ ಪಿಡಿಎಫ್ ವೀಕ್ಷಿಸಿ ಮತ್ತು ಡೌನ್ ಲೋಡ್ ಮಾಡಿ
ಹಂತ 6: ಭವಿಷ್ಯದ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ
ಪರೀಕ್ಷೆ ಬರೆದ ಎಲ್ಲಾ ಮಕ್ಕಳಿಗೂ ಡಿಟಿವಿ ಕನ್ನಡದ ಕಡೆಯಿಂದ ಶುಭಹಾರೈಕೆಗಳು..ಈ ಫಲಿತಾಂಶ ನೆಮ್ಮದಿಯನ್ನು ನೀಡಲಿ ಮುಂದಿನ ನಿಮ್ಮ ಭವಿಷ್ಯ ಉಜ್ವಲ ವಾಗಿರಲಿ ಎಂದು ಹಾರೈಸುತ್ತೇವೆ.