ಉಪ್ಪಿನಂಗಡಿ: ಪಂಕ್ಚರ್ ಆದ ಈ ದೇಶವನ್ನು ನಾವು ಜೊತೆಯಾಗಿ ಸರಿ ಮಾಡಬೇಕಿದೆ. ದೇವರಿಗಿರುವ ಆಸ್ತಿ ವಖ್ಫ್, ಕೇಂದ್ರ ಸರ್ಕಾರ ತರಲು ಹೊರಟಿರುವ ವಖ್ಫ್ ತಿದ್ದುಪಡಿ ಕಾಯ್ದೆ ಲೂಟಿಕಾರರನ್ನು ರಕ್ಷಿಸುವ ಕಾಯ್ದೆಯಾಗಿದೆ ಎಂದು ಚಿಂತಕರು ನ್ಯಾಯವಾದಿ ಸುಧೀರ್ ಕುಮಾರ್ ಮುರೋಲಿ ಇಂದು ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ವತಿಯಿಂದ ನಡೆದ ಕೇಂದ್ರ ಸರ್ಕಾರ ಜಾರಿಗೆ ತಂದ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ದೇಶಕ್ಕೆ ಬೇಕಾಗಿರುವುದು ಒಂದು ದೇಶ ಒಂದು ಎಜುಕೇಷನ್ ಅದು ಬಿಟ್ಟು ಮೋದಿಯ ಒಂದು ದೇಶ ಒಂದು ಚುನಾವಣೆ ಅಲ್ಲ,
ಮುಸಲ್ಮಾನರ ಮೇಲಿನ ದಾಳಿಯನ್ನು ಸಂಭ್ರಮಿಸಬೇಡಿ ಹಿಂದೂಗಳು ಸಹಿತ ಇನ್ನಿತರ ಎಲ್ಲಾ ಧರ್ಮದವರಿಗೂ ಈ ಬಿಜೆಪಿ ಸರ್ಕಾರ ಅನ್ಯಾಯವೆಸಗಲಿದೆ.ಎನ್ ಆರ್ ಸಿ ಯಲ್ಲಿ ಸರ್ಕಾರ ಸೋತ್ತಂತೆ ವಖ್ಫ್ ತಿದ್ದುಪಡಿಯ ಈ ಹೋರಾಟದಲ್ಲೂ ಬಿಜೆಪಿ ಸಂಪೂರ್ಣ ಸೋತು ಸುಣ್ಣವಾಗಲಿದೆ ಎಂದು ಅವರು ಹೇಳಿದರು.
ಡಿ ವೈ ಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ ಮುಸಲ್ಮಾನರು ಇಲ್ಲದಿದ್ದರೆ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ರಂತವರು ಇಂದಿಗೂ ಪಂಚಾಯತ್ ಸದಸ್ಯರಾಗಳು ಕೂಡ ಸಾಧ್ಯವಿಲ್ಲ. ಮೋದಿ ಮತ್ತು ಅಮಿತ್ ಶಾ ಇಂದು ಅಧಿಕಾರದಲ್ಲಿರುವುದೇ ಮುಸಲ್ಮಾನರ ವಿರುದ್ದ ದ್ವೇಷ ರಾಜಕಾರಣದಿಂದಾಗಿದೆ. ಅದಾನಿ ಮತ್ತು ಅಂಬಾನಿಯ ರಕ್ಷಾ ಕವಚವಾಗಿದೆ ಈ ವಖ್ಫ್ ತಿದ್ದುಪಡಿ ಕಾಯ್ದೆ ಎಂದು ಅವರು ಹೇಳಿದರು.




ರಕ್ಷಣೆ ನೀಡಬೇಕಾದ ಸರ್ಕಾರ ಒಂದು ಸಮುದಾಯವನ್ನು ಗುರಿಪಡಿಸಿ ನಡೆಸುವ ಇಂತಹ ನೀಚ ಕೃತ್ಯಗಳನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಉಮೀದ್ ಭೂ ಕಳ್ಳರನ್ನು ಸಂರಕ್ಷಣೆ ಮಾಡಲು ತಂದಿರುವ ಕಾಯ್ದೆಯಾಗಿದೆ ಎಂದು SYS ರಾಜ್ಯ ನಾಯಕ ಎಮ್ಮೆಸ್ಸೆಮ್ zaini ಕಾಮಿಲ್ ಸಖಾಫಿ ಕಕ್ಕಿಂಜೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಎಸ್ ಡಿ ಪಿ ಐ ನಾಯಕ ಸಾದಾತ್ ಬಜತ್ತೂರ್ ಮಾತನಾಡಿ ಉಲಮಾಗಳು ನೀಡಿದ ಕರೆಗೆ ಓ ಗೂಡುವುದು ನಮ್ಮ ಕರ್ತವ್ಯ
ವಖ್ಫ್ ತಿದ್ದುಪಡಿ ವಿರುದ್ಧ ಹೋರಾಟಗಳು ಇನ್ನೂ ನಿರಂತರವಾಗಲಿದೆ ಎಂದು ಅವರು ಹೇಳಿದರು.
ಸಹಸ್ರಾರು ಜನ ಸಾಗರವೇ ನೆರೆದಿತ್ತು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶವನ್ನು ಹೊರ ಹಾಕಲಾಯಿತು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಹೋರಾಟದ ಧ್ವನಿಯನ್ನು ಮೊಳಗಿಸಿದರು.
ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಕರೆಕೊಟ್ಟ ಪ್ರತಿಭಟನೆಗೆ ಉಪ್ಪಿನಂಗಡಿ ಮುಸಲ್ಮಾನ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಸಂಪೂರ್ಣ ಬೆಂಬಲ ನೀಡಿದರು.