dtvkannada

'; } else { echo "Sorry! You are Blocked from seeing the Ads"; } ?>

ಡಿಟಿವಿ ಕನ್ನಡ: ಇತ್ತಿಚೆಗೆ ನಡೆದ ಕಾಶ್ಮೀರ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಿದ್ದು ಅದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಭಾರತದಲ್ಲಿನ 15 ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಇದರ ಬೆನ್ನಲ್ಲೇ ಭಾರತ ಲಾಹೋರ್ನಲ್ಲಿ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ ಅನ್ನು ದ್ವಂಸಗೊಳಿಸಿದೆ ಎಂದು ವರದಿಯಾಗಿದೆ.

ಲಾಹೋರ್ನಲ್ಲಿ ಚೀನಾ ಅಭಿವೃದ್ಧಿ ಪಡಿಸಿದ ಪಾಕಿಸ್ತಾನದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಘಟಕಗಳನ್ನು ಇಸ್ರೇಲ್ ನಿರ್ಮಿತ ಭಾರತ ದ HAROP ಡ್ರೋನ್ ಗಳು ಹೊಡೆದುರುಳಿಸಿದೆ ಎನ್ನಲಾಗಿದೆ.

ಲಾಹೋರ್ನ ಬಳಿ ಒಂದು ಡ್ರೋನ್ ಪತನಗೊಂಡಿದ್ದು ಲಾಹೋರ್ನಲ್ಲಿ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು ಮತ್ತು ಸಿಂಧನ ನಿಯಾನೋದಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಮೂಲದಿಂದ ಹೇಳಿಕೆ ನೀಡಿದ್ದಾರೆ.

ಫಹಲ್ಗಾಂ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆಳವಣಿಗೆ ನಡೆದಿದ್ದು ಮೇ 7 ಮತ್ತು 8ರ ಮಧ್ಯರಾತ್ರಿ ಪಾಕಿಸ್ತಾನ ಅವಂತಿಪುರ ಶ್ರೀನಗರ ಜಮ್ಮಪಟ್ಟಣ ಕೋರ್ಟ್, ಅಮೃತಸರ,ಕಪುರ್ತಲಾ,ಜಲಂಧರ್ ಲುಧಿಯಾನ,ಆದಂಪುರ,ಭಟಿಂಡಾ,ಚಂಡೀಗಢ ಸೇರಿದಂತೆ ಹಲವೆಡೆ ಮಿಲಿಟರಿ ನೆಲೆಗಳಿಗೆ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನಿಸಿದ್ದು ಆದರೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಇಂಡಿಗ್ರೇಟೆಡ್ ಕೌಂಟರ್ ಮತ್ತು ಯುಎಸ್ ಗ್ರಿಡ್ ಮತ್ತು ರಷ್ಯಾ ನಿರ್ಮಿತ S-400 “ಸುದರ್ಶನ್ ಚಕ್ರ” ವಾಯುರಕ್ಷಣಾ ವ್ಯವಸ್ಥೆಗಳು ವಿಫಲಗೊಳಿಸಿರುವ ಬಗ್ಗೆ ಸರಕಾರ ಈಗಾಗಲೇ ಹೇಳಿಕೆಯನ್ನು ನೀಡಿದ್ದು ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಐಪಿಎಲ್ ರದ್ದಾಗಿದ್ದು ಮಂಗಳೂರಿನಿಂದ ಮಿನುಗಾರಿಕೆಗೆ ತೆರಳುವ ಹಡಗುಗಳನ್ನು ಹಾಗೂ ಸಮುದ್ರದಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಶೀಲನೆ ನಡೆಸಿರುವ ಬಗ್ಗೆಯೂ ಮಾಹಿತಿ ಬಂದಿದ್ದು ಭಾರತದ ಪ್ರಜೆಗಳು ಎಚ್ಚರದಿಂದಿರುವುದೂ ಒಳಿತು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಬರಹಗಳು ವೀಡಿಯೋಗಳು ಹರಿದಾಡುತ್ತಿರುವುದು ಕಂಡು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!