ಉಪ್ಪಿನಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜಾ ನಡೆಸಿದ ಭಾಷಣದ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ ಗೆ ಹೈಕೋರ್ಟ್ ತಡೆ ನೀಡಿದೆ.

ಹರೀಶ್ ಪೂಂಜಾ ಪರ ವಾದ ನಡೆಸಿದ ವಕೀಲ ಶಾಸಕರ ವಿರುದ್ಧ ದಾಖಲಾದ ದೂರನ್ನು ನೋಡಿದರೆ ಸೆಕ್ಷನ್ ಗಳು ಅದಕ್ಕೆ ಅನ್ವಯವಾಗುವುದಿಲ್ಲ.
ಧರ್ಮಗಳ ನಡುವೆ ಧರ್ಮ ದ್ವೇಷ ಹರಡುವ ಭಾಷಣ ಶಾಸಕ ಹರೀಶ್ ಪೂಂಜಾ ಮಾಡಿಲ್ಲ ಎಂದು ವಾದಿಸಿದರು.
ಇನ್ನು ಸರ್ಕಾರ ಆರೋಪ ಪಟ್ಟಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದು ಆರೋಪ ಪಟ್ಟಿಯನ್ನು ವಜಾಗೊಳಿಸಲು ಅವರು ಮನವಿ ಮಾಡಿದರು.
ತೆಕ್ಕಾರಿನ ಮುಸ್ಲಿಮರನ್ನು ಕಂಟ್ರಿಗಳು ಎಂದು ಕರೆದು ಒಂದು ಸಮುದಾಯವನ್ನು ಅವಹೇಳನ ಮಾಡಿದ್ದಾರೆ.
ಅರ್ಜಿಯನ್ನು ತಿದ್ದುಪಡಿ ಮಾಡದೇ ಇರುವುದರಿಂದ ಮನ್ನಿಸಲೇ ಬಾರದು ಎಂದು ದುರುದಾರ ಎಸ್ ಬಿ ಇಬ್ರಾಹಿಂ ಪರ ಹಿರಿಯ ವಕೀಲ ಬಾಲನ್ ರವರು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.