ಪುತ್ತೂರು: ಹಲವಾರು ರೋಗ ರುಜಿನಗಳಿಗೆ ಕಷ್ಟ ನಷ್ಟಗಳಿಗೆ ಜಾತಿ ಧರ್ಮ ಮತ ಪಂಗಡವಿಲ್ಲದೇ ಪರಿಹಾರವಾಗಿದ್ದ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ಉರೂಸ್ ಗೆ ನಿನ್ನೆ ಅದ್ದೂರಿಯ ಚಾಲನೆ ದೊರಕಿದೆ.

ಉರೂಸಿನ ಎರಡನೇ ದಿನವಾದ ಇಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಕಾರ್ಯಕ್ರಮದಲ್ಲಿ ಸಂಜೆ 7:30 ರ ಹೊತ್ತಿಗೆ ಬಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಸುರಿಯುವ ಮಳೆಯ ಮದ್ಯೆಯೂ ಸಾವಿರಾರು ಜನ ಸಾಗರವೇ ಸೇರುವ ನಿರೀಕ್ಷೆಯಿದೆ.
ಉಸ್ತಾದರ ಆಗಮನಕ್ಕೆ ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಜೂನ್ 26,27,28,29 ಈ ನಾಲ್ಕು ದಿನಗಳ ಕಾಲ ಕೂರತ್ ನ ಬರೆಪ್ಪಾಡಿಯಲ್ಲಿ ಹಲವಾರು ಧಾರ್ಮಿಕ ವಿದ್ವಾಂಸರು ರಾಜಕೀಯ ನಾಯಕರ ಮುಂದಾಳತ್ವದಲ್ಲಿ ಐತಿಹಾಸಿಕವಾಗಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತಿ ಬಯಸಲಿದ್ದು ನಿನ್ನೆ (26) ಮಧ್ಯಾಹ್ನ ಕೂರತ್ ಮಸೀದಿಯಿಂದ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ಮಖಾಮ್ ತನಕ ಉರೂಸಿನ ಪತಾಕೆಯನ್ನು ಕಾಲ್ನಡಿಗೆ ಮೂಲಕ ಸಹಸ್ರಾರು ಜನರು ಮೆರೆವಣಿಗೆ ಮೂಲಕ ದರ್ಗಾಕ್ಕೆ ತಂದು ಅಲ್ಲಿ ಸೆಯ್ಯದ್ ಕುಂಬೋಲ್ ತಂಙಳ್ ಧ್ವಜಾರೋಹಣ ಮಾಡುವ ಮೂಲಕ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಗೆ ಅದ್ದೂರಿಯ ಚಾಲನೆ ನೀಡಲಾಗಿದೆ.
ಇನ್ನು ನಾಲ್ಕು ದಿನಗಳ ಕಾಲ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು.
ಲಕ್ಷಾಂತರ ಮಂದಿ ಜನ ಸೇರುವ ನಿರೀಕ್ಷೆಯಿದೆ.
ಉರೂಸಿನ ಕೊನೆಯ ದಿನ ಜೂನ್ 29 ರಂದು ಬೆಳಿಗ್ಗೆ 10 ರಿಂದ ಅನ್ನ ಸಂತರ್ಪಣೆ ನಡೆಯಲಿದ್ದು ಅಂದು ಸಂಜೆ 6 ಗಂಟೆ ತನಕ ಮುಂದುವರಿಯಲಿದೆ.
ಅನ್ನದಾನದಲ್ಲಿ ಸರಿ ಸುಮಾರು 70 ಸಾವಿರಕ್ಕೂ ಮಿಕ್ಕ ಜನ ಸೇರುವ ನಿರೀಕ್ಷೆಯಿದೆ.