dtvkannada

'; } else { echo "Sorry! You are Blocked from seeing the Ads"; } ?>

ಸಕಲೇಶಪುರ: ಎಲ್ಲೆಡೆ ಸರಳವಾಗಿ ಗಣೇಶೋತ್ಸವ ಆಚರಿಸುತ್ತಿರುವವಾಗ ನಿಯಮ ಮೀರಿ ಸಾರ್ವಜನಿಕ ಗಣೇಶೋತ್ಸವ ಮಾಡಿದ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಕೊರೋನ ನಿಯಮವನ್ನು ಮೀರಿ ಗಣೇಶನ ಮೆರವಣಿಗೆ ಹೋಗುತ್ತಿದ್ದ ಗಣೇಶೋತ್ಸವ ಸಮಿತಿಯ ಸದಸ್ಯರೆನ್ನಲಾದ ಸಂಘಪರಿವಾರದ ತಂಡವೊಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.
ನಿಯಮ ಮೀರಿ ಮೆರವಣಿಗೆ ನಡೆಸುತ್ತಿದ್ದ ಗುಂಪನ್ನು ಪೊಲೀಸ್ ಇಲಾಖೆ ತಡೆದಿದೆ. ಈ ಸಂದರ್ಭ ಪೊಲೀಸರ ವಿರೋಧವನ್ನು ಕ್ಯಾರೇ ಅನ್ನದೆ, ಪೊಲೀಸರನ್ನೇ ಎಳೆದಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಕಲೇಶಪುರದ ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ವತಿಯಿಂದ ಶುಕ್ರವಾರ ಗಣೇಶೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಂಜೆಯ ವೇಳೆ ಗಣೇಶ ವಿಗ್ರಹದ ವಿಸರ್ಜನೆ ಸಂದರ್ಭ ಮಾಸ್ಕ್ ಧರಿಸದೆ , ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂಡೆ, ವಾದ್ಯ ಸಹಿತ ಮೆರವಣಿಗೆ ಆಯೋಜಿಸಲಾಗಿತ್ತು. ತಂಡವೊಂದು ರಸ್ತೆಯಲ್ಲಿ ನೃತ್ಯ ಮಾಡುತ್ತಾ, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕೋವಿಡ್ ಮಾರ್ಗಸೂಚನೆ ಪಾಲಿಸುವಂತೆ ಮೆರವಣಿಗೆ ನಿರತರಿಗೆ ತಿಳಿಹೇಳಲು ಮುಂದಾದ ಪಟ್ಟಣ ಸಬ್ ಇನ್ಸೆಕ್ಟರ್ ಬಸವರಾಜ್ ಚಿಂಚೋಳ್ಳಿ ಅವರ ಜೊತೆ ಬಜರಂಗ ದಳದ ರಾಜ್ಯ ಸಂಚಾಲಕರೆನ್ನಲಾದ ರಘು ಹಾಗೂ ಇತರ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಇನ್ ಸ್ಪೆಕ್ಟರ್‌ ಜೊತೆ ವಾಗ್ವಾದಕ್ಕಿಳಿದ ತಂಡವು ಇನ್ ಸ್ಪೆಕ್ಟರ್ ರನ್ನು ನೂಕಾಟ – ತಳ್ಳಾಟ ನಡೆಸಿದ್ದು, ಅಕ್ಷರಶಃ ಎಳೆದಾಡಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೋಲಿಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಕ್ರಿಮಿನಲ್ ಗಳನ್ನು UAPA ಅಡಿಯಲ್ಲಿ ಬಂಧಿಸಿ ಇನ್ನುಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ಇಲಾಖೆಯು ಎಚ್ಚರವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

— Riyaz Farangipete (@RiyazfSDPI) September 11, 2021

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!