ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ ಮಾಡಿಕೊಂಡೇ ಬಂದಿದ್ದಾರೆ. ಕಾಂಗ್ರೆಸ್ ಅಂದರೆ ಗಿಮಿಕ್- ಗಿಮಿಕ್ ಅಂದರೆ ಕಾಂಗ್ರೆಸ್ ಎಂದು ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರ ಕಾಲದಲ್ಲೂ ಇಂಧನ ಬೆಲೆ ಹೆಚ್ಚಾಗಿತ್ತು.ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತದೆಯೋ? ಡಿಸೇಲ್, ಪೆಟ್ರೋಲ್ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದಲ್ಲಿ ತಾಕತ್ ಇದ್ದರೆ ವ್ಯಾಟ್ ಕಡಿಮೆ ಮಾಡಿ ನೋಡಿ ಎಂದು ಕಾಂಗ್ರೆಸ್ ಗೆ ಸವಾಲೆಸೆದರು.