ವಿಟ್ಲ: SYS ಉಕ್ಕುಡ ಬ್ರಾಂಚ್ ಇದರ 2020-2021 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಶರೀಫ್ ತ್ವೈಬ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಶರೀಅತ್ ಕಾಲೇಜು ಉಕ್ಕುಡದಲ್ಲಿ ನಡೆಯಿತು.
ಮಹಾಸಭೆಯಲ್ಲಿ 2020-2021 ರ ಸಾಲಿನಲ್ಲಿ SYS ಉಕ್ಕುಡ ಬ್ರಾಂಚ್ ನಡೆಸಿದ ಕಾರ್ಯಕ್ರಮಗಳ ಮೇಲೆ ನೋಟ ಹರಿಸಲಾಯಿತು.
ವಾರ್ಷಿಕ ವರದಿಯನ್ನು SYS ಉಕ್ಕುಡ ಬ್ರಾಂಚ್ ನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಲತ್ವೀಫಿ ರವರು ಮಂಡಿಸಿದರು. ಹಾಗೂ 2020-2021 ರ ಸಾಲಿನಲ್ಲಿ ಸಂಸ್ಥೆಯು ನಡೆಸಿದ ಸಾಂತ್ವನ ಕಾರ್ಯಕ್ರಮ ಹಾಗೂ ಕಳೆದ ಒಂದು ವರ್ಷದ ಲೆಕ್ಕ ಪತ್ರಗಳ ವರದಿಯನ್ನು ಕೋಶಾಧಿಕಾರಿ ಅಬೂಬಕ್ಕರ್ ಟೆಲಿಫೋನ್ ರವರು ಸಮರ್ಪಿಸಿದರು.
ಇದೇ ಸಂಧರ್ಭದಲ್ಲಿ SYS ಉಕ್ಕುಡ ಬ್ರಾಂಚ್ ನ 2021-2022ನೇ ವರ್ಷದ ನೂತನ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನಾಡಿನ ಪ್ರತಿಷ್ಠಿತ ಕುಟುಂಬದ ಉದ್ಯಮಿ ಡಿ. ಕೆ. ಅಬ್ದುಲ್ ಖಾದರ್ ಕಾನತ್ತಡ್ಕ ರವರನ್ನು ಆಯ್ಕೆ ಮಾಡಲಾಯಿತು, ಕಾರ್ಯದರ್ಶಿಯಾಗಿ ಇಕ್ಬಾಲ್ ಯು ಎಮ್ ಉಕ್ಕುಡ, ಕೋಶಾಧಿಕಾರಿಯಾಗಿ ಶರೀಫ್ ತ್ವೈಬಾ, ಇಸಾಬಾ ಕಾರ್ಯದರ್ಶಿಯಾಗಿ ಹಮೀದ್ ನಝೀಂ ಫಿಲ್ಲತ್, ದಅ್ ವಾ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಲತ್ವೀಫಿ ಯವರನ್ನು ಆರಿಸಲಾಯಿತು.
ಮಹಾಸಭೆಯ ವೀಕ್ಷಕರಾಗಿ SYS ಕನ್ಯಾನ ಸೆಂಟರ್ ನ ಸಲೀಂ ಹಾಜಿ ಬೈರಿಕಟ್ಟೆ, ಸುಲೈಮಾನ್ ಸಖಾಫಿ ಕನ್ಯಾನ ಆಗಮಿಸಿದ್ದರು, ಮಹಾಸಭೆಯಲ್ಲಿ ಬಶೀರ್ ಸಖಾಫಿ,ಅದ್ದುಚ್ಚ ಬುಡಾಡ್ತಡ್ಕ, ಆದಂ ಮುಸ್ಲಿಯಾರ್, ಯೂನುಸ್ ಕಾಂತಡ್ಕ ಮತ್ತು SYS ಹಾಗೂ SSF ಇದರ ಸದಸ್ಯರು ಉಪಸ್ಥಿತರಿದ್ದರು.