dtvkannada

(ವರದಿ)- ಸಲೀಂ ಮಾಣಿ

ಮಾಣಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್‌ ಇದರ ಪುನರ್ರಚನಾ ಸಭೆಯು ಮಾಣಿ ದಾರುಲ್ ಇರ್ಶಾದ್ ‌ಸಭಾಂಗಣದಲ್ಲಿ ನಡೆಯಿತು.
ದಾರುಲ್ ಇರ್ಶಾದ್ ಶಿಲ್ಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ದುಆಃ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಸೆಂಟರ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿರವರು ಸಭೆಯ ಅಧ್ಯಕ್ಷತೆ ವಹಿಸಿದರು.ಜಿಲ್ಲಾ ನಾಯಕರಾದ ಸುಲೈಮಾನ್ ಸ‌ಅದಿ ಪಾಟ್ರಕೋಡಿರವರು ಉದ್ಘಾಟಿಸಿದರು.ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ವರದಿ ವಾಚಿಸಿದರು.ಕೋಶಾಧಿಕಾರಿ ಖಾಸಿಂ ಹಾಜಿ ಪರ್ಲೊಟ್ಟು ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.

ನಿರ್ಗಮನ ಅಧ್ಯಕ್ಷ ಇಬ್ರಾಹಿಂ ಸ‌ಅದಿ ಮಾಣಿ ಮಾತನಾಡಿ ‘ಸಂಘಟನೆಗೆ ನಾವು ಬೇಕಾಗಿಲ್ಲ, ನಮಗೆ ಸಂಘಟನೆ ಬೇಕಾಗಿದೆ, ನಮ್ಮ ಪೂರ್ವಿಕ ಮಹಾನುಭಾವರು ಹಾಕಿಕೊಟ್ಟ ಪಾದದಲ್ಲಿ ಮುನ್ನಡೆದು, ಭಯಭಕ್ತಿಯಿಂದ ಸಂಘಟನೆಯಲ್ಲಿ ಕಾರ್ಯಚರಿಸಿ ಇಹಪರ ವಿಜಯಿಗಳ ಸಾಲಿನಲ್ಲಿ ಸೇರೋಣ,ಅಲ್ಲಾಹನು ಅನುಗ್ರಹಿಸಲಿ ಎಂದು ಹಾರೈಸಿದರು.
ಸಭೆಯ ಕೇಂದ್ರ ಬಿಂದು ರಾಜ್ಯ ನಾಯಕರಾದ ಜಿ. ಎಂ. ಕಾಮಿಲ್ ಉಸ್ತಾದರು ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಿಂದ ಆಗಮಿಸಿದ ಸಭೆಯ ವೀಕ್ಷಕರಾದ ಸೆಂಟರ್ ಉಸ್ತುವಾರಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುರವರು 2021-23 ಸಾಲಿಗೆ ನೂತನ ಸಮಿತಿಯನ್ನು ರಚಿಸಿದರು. ಅದರಂತೆ ಅಧ್ಯಕ್ಷರಾಗಿ ಸುಲೈಮಾನ್ ಸ‌ಅದಿ ಪಾಟ್ರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸ್ವಾದಿಖ್ ಪೇರಮೊಗರು, ಕೋಶಾಧಿಕಾರಿಯಾಗಿ ದಾವೂದ್ ಕಲ್ಲಡ್ಕ, ಉಪಾಧ್ಯಕ್ಷರಾಗಿ ಯೂಸುಫ್ ಹಾಜಿ ಸೂರಿಕುಮೇರು, ದ‌ಅ್‌ವಾ ಕಾರ್ಯದರ್ಶಿಯಾಗಿ ಅಬ್ದುರ್ರಶೀದ್ ಸಖಾಫಿ ಗಡಿಯಾರ, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಹಬೀಬ್ ಶೇರಾ-ಬುಡೋಳಿ, ಸಾಮಾಜಿಕ ಕಾರ್ಯದರ್ಶಿಯಾಗಿ ಮೊಯ್ದೀನ್ ಕುಟ್ಟಿ ಪೆರ್ನೆ, ಇಸಾಬಾ ಕಾರ್ಯದರ್ಶಿಯಾಗಿ ಯ‌ಅ್‌ಕೂಬ್ ನಚ್ಚಬೆಟ್ಟು, ಸದಸ್ಯರಾಗಿ ಇಬ್ರಾಹಿಂ ಸ‌ಅದಿ ಮಾಣಿ, ಯೂಸುಫ್ ಸಯೀದ್ ನೇರಳಕಟ್ಟೆ,ಖಾಸಿಂ ಹಾಜಿ ಪರ್ಲೋಟು,ಸುಲೈಮಾನ್ ಸೂರಿಕುಮೇರ್, ಖಾಸಿಂ ಪಾಟ್ರಕೋಡಿ, ಹನೀಫ್ ಮುಸ್ಲಿಯಾರ್ ಪೆರ್ನೆ, ಹನೀಫ್ ಸಖಾಫಿ ಪೇರಮೊಗರು, ಇಬ್ರಾಹಿಂ (ಉಂಞಾಕ) ಬಂಗಾರಬೆಟ್ಟು, ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ, ಹೈದರ್ ಸಖಾಫಿ ಶೇರಾ-ಬುಡೋಳಿ, ಅಬ್ಬಾಸ್ ಗಡಿಯಾರ, ಅಬ್ದುಲ್ ಲತೀಫ್ ಸ‌ಅದಿ ಶೇರಾ, ಮುಹಮ್ಮದ್ ರಫೀಖ್ ಮದನಿ ಪಾಟ್ರಕೋಡಿ, ಖಾಸಿಂ ಮುಸ್ಲಿಯಾರ್ ಸೂರ್ಯ, ಅಬ್ದುಲ್ ಅಝೀಝ್ ಸಖಾಫಿ ಸೂರ್ಯ, ಶಾಹುಲ್ ಹಮೀದ್ ಪರ್ಲೋಟು.ಜಿಲ್ಲಾ ಕೌನ್ಸಿಲರುಗಳಾಗಿ ಸುಲೈಮಾನ್ ಸ‌ಅದಿ ಪಾಟ್ರಕೋಡಿ,ಸ್ವಾದಿಖ್ ಪೇರಮೊಗರು, ದಾವೂದ್ ಕಲ್ಲಡ್ಕ, ಜಿ. ಎಂ. ಕಾಮಿಲ್ ಸಖಾಫಿ, ಟಿ. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಇಬ್ರಾಹಿಂ ಸ‌ಅದಿ ಮಾಣಿ, ಯೂಸುಫ್ ಸಯೀದ್ ಪುತ್ತೂರು, ಖಾಸಿಂ ಹಾಜಿ ಪರ್ಲೋಟು, ಯೂಸುಫ್ ಹಾಜಿ ಸೂರಿಕುಮೇರ್, ಅಬ್ದುರ್ರಶೀದ್ ಸಖಾಫಿ ಗಡಿಯಾರ, ಸುಲೈಮಾನ್ ಸೂರಿಕುಮೇರ್, ಪಿ. ಎಚ್. ಅಬ್ದುಲ್ ಲತೀಫ್ ಕಲ್ಲಡ್ಕರವರು ಆಯ್ಕೆಯಾದರು.

ಸಭೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಂ ಪದ್ಮುಂಜರವರು ನೂತನ ಸಮಿತಿಗೆ ಶುಭ ಹಾರೈಸಿದರು. ಜಿಲ್ಲಾ ನಾಯಕರು ಹಾಗೂ ಮೂರುಗೊಳಿ ಸೆಂಟರ್ ಅಧ್ಯಕ್ಷರಾದ ಹೈದರ್ ಹಾಜಿ ಹಾಗೂ ಅಬ್ದುರ್ರಶೀದ್ ಸಖಾಫಿ ಗಡಿಯಾರ ಸಭೆಯಲ್ಲಿ ಉಪಸ್ಥಿತರಿದ್ದರು. ಸೆಂಟರ್ ವ್ಯಾಪ್ತಿಯ ಬ್ರಾಂಚುಗಳಿಂದ ಸೆಂಟರ್ ಕೌನ್ಸಿಲರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಮಹಾಸಭೆಯ ವೇದಿಕೆಯಲ್ಲಿ ಎಸ್‌ವೈ‌ಎಸ್ ಮಾಣಿ ಸೆಂಟರ್ ಕಾರ್ಯ ಚಟುವಟಿಕೆಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಸಂಘಟನೆಗಾಗಿ ನಿಸ್ವಾರ್ಥ ಸೇವೆಗೈದ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆಯವರನ್ನು ಎಸ್‌ವೈ‌ಎಸ್ ಕಲ್ಲಡ್ಕ ಬ್ರಾಂಚ್ ಪರವಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಶಾಲು ಹೊದಿಸಿ ಸನ್ಮಾನಿಸಿದರು,
ಕೊನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮರ್ಹೂಂ ಎಡಪ್ಪಲ್ ಮುಹಮ್ಮದ್ ಉಸ್ತಾದ್, ಸಯ್ಯಿದತ್ ಬೀವಿ ಕುಂಬೋಳ್, ತಾಜುಲ್ ಫುಖಃಆಹ್ ಹಾಗೂ ನಮ್ಮನ್ನಗಲಿದ ಉಲಮಾ-ಉಮರಾ ನಾಯಕರ ಮೇಲೆ ತಹ್ಲೀಲ್ ಹೇಳಿ ದುಆಃ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸ್ವಾದಿಖ್ ಪೇರಮುಗೇರ್ ಸ್ವಾಗತಿಸಿದರು. ನೂತನ ಸಾಮಾಜಿಕ ಕಾರ್ಯದರ್ಶಿ ಮೊಯ್ದಿನ್ ಪೆರ್ನೆ ಧನ್ಯವಾದಗೈದರು. ಮೂರು ಸ್ವಲಾತ್ ನೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!