ಮಂಗಳೂರು, ಅ.14: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ವಿರುದ್ದ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮೊಹಮ್ಮದ್ ಫಾರೂಕ್ (45) ಬಂಧಿತ ಆರೋಪಿ. 19 ವರ್ಷದ ಸಂತ್ರಸ್ತ ಯುವತಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಗುತ್ತಿಗೆ ಅಧಾರದಲ್ಲಿ ಉದ್ಯೋಗಿಯಾಗಿದ್ದಳು.
ಲೈಂಗಿಕ ಕಿರುಕುಳದಿಂದ ಬೇಸೆತ್ತ ಹುಡುಗಿ ಎರಡು ದಿನಗಳ ಹಿಂದೆ ಕೆಲಸ ತೊರೆದಿದ್ದು, ಆರೋಪಿಯ ವಿರುದ್ದ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಆರೋಪಿ ಮಹಮ್ಮದ್ ವಾಟ್ಸಪ್ ನಲ್ಲಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ. ನನ್ನ ನಗ್ನ ಚಿತ್ರಗಳನ್ನೂ ಕಳುಹಿಸುವಂತೆಯೂ ಒತ್ತಾಯಿಸಿದ್ದ. ಅಲ್ಲದೇ ಕೆಲಸದ ವೇಳೆ ಕಛೇರಿಯಲ್ಲಿ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ಸಂಬಂಧಿಸಿ 354 ಎ, 364 ಡಿ ಮತ್ತು 506 ಸೆಕ್ಷನಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ರಾತ್ರಿ ಆತನನ್ನು ಬಂಧಿಸಿದ್ದಾರೆ.