ಗುರುಪುರ: SKSSF ಗುರುಪುರ ಕೈಕಂಬ ವಲಯ” ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಶುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು, ಅಲ್-ಬಿರ್ರ್ ಇಸ್ಲಾಮಿಕ್ ಸ್ಕೂಲ್, ಅಲ್-ಮದರಸತುಲ್ ಅಸ್ರಾರುದ್ದೀನ್ ಹಾಗೂ, ಮಿತಬೈಲ್ ಉಸ್ತಾದ್ ಹಿಫ್ಲ್ ಕಾಲೇಜು ಎಂಬ ಇತ್ಯಾದಿ ವಿದ್ಯಾ ಸಮನ್ವಯ ಪಾಲನೆಯ ಕಟ್ಟಡ ಉದ್ಘಾಟನೆ ಇದೇ ಬರುವ ಅಕ್ಟೋಬರ್ 29 ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷರಾದ ಬಹು: ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್” ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ SKSSF ಜಿಲ್ಲಾ ಅಧ್ಯಕ್ಷರಾದ ಬಹು ಸೆಯ್ಯದ್ ಅಮೀರ್ ತಂಙಳ್, ಕೈಕಂಬ ವಲಯ ಅಧ್ಯಕ್ಷರಾದ ಬಹು ಜಮಾಲುದ್ದೀನ್ ದಾರಿಮಿ, ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್, ಮದ್ರಸ ಮ್ಯಾನೇಜ್ಮೆಂಟ್ ಗುರುಪುರ ರೇಂಜ್ ಇದರ ನಾಯಕರು ಸೇರಿದಂತೆ ಸಾಮಾಜಿಕ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಕೈಕಂಬ ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.