';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಡುಪಿ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಸಹಪಾಠಿಯೇ ಅತ್ಯಾಚಾರವೆಸಗಿದ ಘಟನೆ ಮಣಿಪಾಲ ಕಾಲೇಜ್ ನಲ್ಲಿ ನಡೆದಿದೆ. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಆರೋಪಿ ಆರ್ಯನ್ ಚಂದಾವನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಉತ್ತರಪ್ರದೇಶ ಮೂಲದವರು. ಆರೋಪಿ ದೆಹಲಿ ಮೂಲದವ ಎಂದು ತಿಳಿದು ಬಂದಿದೆ.ಇವರಿಬ್ಬರೂ ಮಣಿಪಾಲ್ನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಅ.16ರ ರಾತ್ರಿ ನಗರದ ಇಂದ್ರಾಳಿಯ ಫ್ಲ್ಯಾಟ್ವೊಂದರಲ್ಲಿ ಕುಡಿದ ನಶೆಯಲ್ಲಿ ಗೆಳತಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಕುರಿತು ಸಂತ್ರಸ್ತೆ ಅ.17ರ ಬೆಳಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.