';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬದ್ರಿಯಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ಗುಂಡ್ಯಡ್ಕ ವತಿಯಿಂದ ಬೃಹತ್ ಮೀಲಾದ್ ಕಾರ್ಯಕ್ರಮ ನೆರವೇರಿತು. ಬುಧವಾರ ಮಗ್ರೀಬ್ ನಮಾಝಿನ ಬಳಿಕ ಮಕ್ಕಳ ಕಾರ್ಯಕ್ರಮ ಪ್ರಾರಂಭವಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ನೇತೃತ್ವವನ್ನು ಅಲ್ ಹಾದಿ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ವಹಿಸಿದ್ದರು.
ಸಾದತ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.H. I. M. ಗುಂಡ್ಯಡ್ಕ ಸದರ್ ಮುಹಲ್ಲಿಂ ರಫೀಕ್ ಮದನಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣಗೈದರು. ಜಲೀಲ್ ಸಖಾಫಿ ಬರಿಮಾರ್ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಮಾಜ ಸೇವಕ ಆಸಿಫ್ ಆಪತ್ಭಾಂದವ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಅದ್ಯಕ್ಷರಾದ ಸಯ್ಯದ್ ಆಲಿ, ಲತೀಫ್ ಸಹದಿ, ಅಬ್ದುಲ್ ರಹಿಮಾನ್ ಹಾಜಿ ಶೇರ ಉಪಸ್ಥಿತರಿದ್ದರು.ಮಹಮ್ಮದ್ ಗಝ್ಝಾಲಿ ಕುಡ್ತಮುಗೇರು ಕಾರ್ಯಕ್ರಮ ನಿರೂಪಣೆಗೈದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್ ವಿತರಣೆ ನಡೆಯಿತು