dtvkannada

ಮೂಡುಬಿದ್ರೆ(Oct 28): ಮೂಡುಬಿದಿರೆ ಸಮೀಪದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಟ್ರೆಡೀಶನಲ್ ಡೇ ಪ್ರಯುಕ್ತ ಧರಿಸಿದ ವಸ್ತ್ರವನ್ನು ಪ್ರಶ್ನಿಸಿ ಇಬ್ಬರು ವಿದ್ಯಾರ್ಥಿಗಳ ಮೇಲೆ ನಲ್ವತ್ತು ಮಂದಿಯ ತಂಡದಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕ್ಯಾಂಪಸ್ ಫ್ರಂಟ್ ಜಿಲ್ಲಾ ನಿಯೋಗ ಆಸ್ಪತ್ರೆಗೆ ಭೇಟಿಯಾಗಿ ಹಲ್ಲೆಗೈದ ವಿದ್ಯಾರ್ಥಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಆಗ್ರಹಿದ್ದಾರೆ.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ಅರ್ಫಿದ್ ಅಡ್ಕಾರ್, ಮಂಗಳೂರು ನಗರ ಜಿಲ್ಲಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಕಾರ್ಯದರ್ಶಿ ಸರ್ಫರಾಝ್ ನಿಯೋಗದಲ್ಲಿದ್ದರು.

By dtv

Leave a Reply

Your email address will not be published. Required fields are marked *

error: Content is protected !!