ಮಾಣಿ: ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಆಯೋಜಿಸಿದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಮತ್ತು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನಡೆಸಿದ ಪ್ರತಿಭೋತ್ಸವದಲ್ಲಿ ತೃತೀಯ ಸ್ಥಾನ ಪಡೆದು ಭರವಸೆ ಮೂಡಿಸಿದ ಎಸ್ಸೆಸ್ಸೆಫ್ ಸೂರಿಕುಮೇರು ತಂಡಕ್ಕೆ ಅಭಿನಂದನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಕೆಸಿಎಫ್ ರಿಯಾದ್ ಝೋನ್ ಸಂಘಟನಾ ಇಲಾಖೆ ಚೆಯರ್‌ಮೆನ್ ಮುಸ್ತಫಾ ಸಅದಿ ಸೂರಿಕುಮೇರು, ಪ್ರತಿಭೋತ್ಸವದ ಮೂಲಕ ಮಕ್ಕಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರ ಹಾಕಸಿ ಆ ಮೂಲಕ ಭಾಷಣ, ಕಲೆ, ಸಾಹಿತ್ಯ, ಗಾಯನ, ಮುಂತಾದ ಹಲವಾರು ಕ್ಷೇತ್ರಗಳಿಗೆ ಬೇಕಾದ ಅಮೂಲ್ಯ ವ್ಯಕ್ತಿಗಳನ್ನು ಸಮಾಜಕ್ಕೆ ಅರ್ಪಿಸಲಾಗುತ್ತದೆ, ಅವರೇ ಮುಂದೆ ಸಮಾಜದ ಮುಖ್ಯ ವಾಹಿನಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಧನ್ಯರಾಗುತ್ತಾರೆ, ಅಂತಹ ಪ್ರತಿಭೆಗಳನ್ನು ಪೋಷಿಸುವ ಕಾರ್ಯಕ್ರಮಗಳಿಗೂ ಅದನ್ನು ಸಂಘಟಿಸುವವರನ್ನೂ ಬೆಂಬಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿ ಮಂಜನಾಡಿ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿದರು. ಅಬ್ದುಲ್ ಕರೀಂ ಸೂರಿಕುಮೇರು ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಜಿಲ್ಲಾ ಕೌನ್ಸಿಲರ್ ಹೈದರ್ ಸಖಾಫಿ ಶೇರಾ ಪ್ರಸ್ತಾವಿಕ ಭಾಷಣ ಮಾಡಿದರು. ಸಯ್ಯಿದ್ ಸಾಬಿತ್ ಮುಈನೀ ಸಖಾಫಿ ಪಾಟ್ರಕೋಡಿ ದುಆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಜಿಲ್ಲಾ ಕೌನ್ಸಿಲರ್ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ದಅವಾ ಕಾರ್ಯದರ್ಶಿ ಮುಸ್ತಫಾ ಬುಡೋಳಿ, ಅಬ್ದುಲ್ ಖಾದರ್ ಕೊಡಿಪ್ಪಾಡಿ, ಎಸ್‌ವೈಎಸ್ ಜಿಲ್ಲಾ ಕೌನ್ಸಿಲರ್ ಯೂಸುಫ್ ಹಾಜಿ ಸೂರಿಕುಮೇರು, ಎಸ್‌ವೈಎಸ್ ಬ್ರಾಂಚ್ ಮಾಜಿ ಪ್ರೆಸಿಡೆಂಟ್ ಹನೀಫ್ ಸಂಕ, ಇಬ್ರಾಹಿಂ ಮುಸ್ಲಿಯಾರ್ ಮಾಣಿ, ಅಬ್ದುಲ್ ಖಾದರ್ ಬರಿಮಾರು, ಇಮ್ರಾನ್ ಸೂರಿಕುಮೇರು, ಜಾಬಿರ್ ಸೂರಿಕುಮೇರು,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರತಿಭೋತ್ಸವದಲ್ಲಿ ಹೆಸರು ಗಳಿಸಿದ ಸೂರಿಕುಮೇರು ತಂಡವನ್ನು ಪ್ರೋತ್ಸಾಹಿಸುವ ಸಲುವಾಗಿ ಎಲ್ಲಾ ಸದಸ್ಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಸರಗೋಡು ಸಅದಿಯಾ ವಿದ್ಯಾರ್ಥಿ ಇಸಾಕ್ ಮಾಣಿ ಅಶ್ರಕ ಬೈತ್ ಹಾಡಿದರು. ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಬಶ್ಶಿರ್ ಸೂರಿಕುಮೇರು ಧನ್ಯವಾದಗೈದರು.