dtvkannada

ಮಂಗಳೂರು: ಮಂಗಳೂರಿನ ಹೊಯ್ಗೆ ಬಜಾರ್ ನಲ್ಲಿ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗುವನ್ನು ಉಪ್ಪು ನೀರಿನ ಮೀನಿನ ತೊಟ್ಟಿಗೆ ಮಗುವನ್ನು ಎಸೆದ ಹೇಯ ಕೃತ್ಯ ನಡೆದಿದೆ.

ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದಿಂದ ಬಂದ ದಂಪತಿಯ ಮಗುವಾಗಿದ್ದು , ಇಬ್ಬರೂ ಸಂಜೆ ಕೆಲಸ ಮಾಡಿ ಬರುವಾಗ ಮಗು ನಾಪತ್ತೆಯಾಗಿತ್ತು. ಮಗುವನ್ನು ಹುಡುಕಾಡಿದಾಗ ರಾತ್ರಿ 9 ಗಂಟೆ ಸುಮಾರಿಗೆ ಉಪ್ಪು ನೀರಿನ ಮೀನಿನ ತೊಟ್ಟಿಯಲ್ಲಿ ಮಗು ಪತ್ತೆಯಾಗಿದ್ದು ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರ ಮೂಲದ ವ್ಯಕ್ತಿಯಾದ ಆರೋಪಿ ಚಂದನ್ ಈ ಕೃತ್ಯವನ್ನು ನಡೆಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಹೆಚ್ಚಿನ ಮಾಹಿತಿ ಸಿಕ್ಕಿದೆ.ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಈ ಬಗ್ಗೆ ಪತ್ರಿಕೆಯೊಂದಿಗೆ ಮಾಹಿತಿ ನೀಡುತ್ತಾ ಮಾತನಾಡಿ, ಮಗು ಈಗ ಪ್ರಾಣಾಪಾಯದಿಂದ ಪಾರಾಗಿದ್ದು ಆರೋಪಿಯಾದ ಚಂದನ್ ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!