ನರಿಮೊಗರು : ಪುತ್ತೂರಿನ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಆಕ್ಟೀವಾ ಸವಾರ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.ಮೃತಪಟ್ಟ ವ್ಯಕ್ತಿ ಪೇರಮೊಗರಿನ ಸೋಮಶೇಕರ ರೈ (40) ಎಂದು ತಿಳಿದು ಬಂದಿದೆ.
ದರ್ಬೆಯಿಂದ ಸವಣೂರು ಕಡೆ ತೆರಳುತ್ತಿದ್ದ ಕಾರು ಮತ್ತು ಸವಣೂರು ಕಡೆಯಿಂದ ಬರುತ್ತಿದ್ದ ಆಕ್ಟೀವಾ ನಡುವೆ ಅಪಘಾತ ಸಂಭವಿಸಿದ್ದು , ಅಪಘಾತದ ತೀವ್ರತೆಗೆ ಆಕ್ಟೀವಾ ಸವಾರ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.