dtvkannada

ವಿಜಯಪುರ: ಹೆದ್ದಾರಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ತಾಯಿ ಮಗುವಿನ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಗೀತಾ ಪೂಜಾರಿ(35) ಹಾಗೂ ಆಕೆಯ ಮಗ ಮಂಜು ಪೂಜಾರಿ(4) ಮೃತ ದುರ್ದೈವಿಗಳು. ವಿಜಯಪುರ ತಾಲೂಕಿನ ತಿಡಗುಂದಿ ಬಳಿಯ ಎನ್ ಎಚ್ 50 ಹೆದ್ದಾರಿ ಮೇಲೆ ಗೀತಾ ಪೂಜಾರಿ ಮತ್ತು ಮಂಜು ಪೂಜಾರಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಯಮದೂತನಂತೆ ಬಂದ ಕೆಎ 28 – ಪಿ 0922 ನಂಬರಿನ ಕಾರು ಇವರಿಬ್ಬರ ಮೇಲೆ ಹರಿದಿದ್ದು, ಈ ಪರಿಣಾಮ ತಾಯಿ, ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾಸ್ಥಳಕ್ಕೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಭೇಟಿ ನೀಡಿದ್ದು, ಪ್ರತಿಭಟನೆಯಲ್ಲಿ ತೊಡಗಿದ್ದವರ ಮನವೊಲಿಕೆಗೆ ಯತ್ನ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನ ಕರೆಯಿಸಿ ಮಾತನಾಡು ಭರವಸೆ ನೀಡಿದ್ದು, ಅಧಿಕಾರಿಗಳು ಸ್ಪಂದಿಸದೇ ಇದ್ದರೆ ನಾನು ನಿಮ್ಮೊಂದಿಗೆ ಧರಣಿ ನಡೆಸುವೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಸ್ಥಳಿಯರು ಕಾರು ಚಾಲಕನನ್ನು ಹಿಡಿದಿದ್ದು, ತಿಡಗುಂದಿ ಹೊರ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಹಿನ್ನೆಲೆ ಸ್ಥಳದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ರಾತ್ರಿಯೇ ನ್ಯಾಯಕ್ಕಾಗಿ ಧರಣಿಗೆ ಕುಳಿತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!