ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ಹರಿಬಿಟ್ಟು ಯುವಕನೊಬ್ಬ ವಿಕೃತಿ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಯುವಕ ತನ್ನ ವಾಟ್ಸಫ್ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ ಹಾಕಿ ವಿಕೃತಿ ಮೆರೆದಿದ್ದಾನೆ.
ಮನನೊಂದ ಯವತಿಯಿಂದ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಗರದ ಖಾಸಗಿ ಶಾಲಾ ವಿದ್ಯಾರ್ಥಿ ಶುಭಂ ಕೌಲೆ ಎನ್ನುವಾತ ಈ ಕೃತ್ಯ ಎಸಗಿದ ಆರೋಪಿ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಸಲುಗೆ ಬೆಳೆಸಿದ್ದ ಯುವಕ ಬಳಿಕ ಹೀಗೆ ಮಾಡಿದ್ದಾನೆ. ಅದೇ ಸಲುಗೆಯಲ್ಲಿ ವಾಟ್ಸ್ಆ್ಯಪ್ನಲ್ಲೇ ಯುವತಿಯ ನಗ್ನ ವೀಡಿಯೋವನ್ನು ಚಿತ್ರೀಕರಣ ಮಾಡುವ ಬಯಕೆ ವ್ಯಕ್ತಪಡಿಸಿದ್ದಾನೆ.
ಶುಭಂ ಕೌಲೆಯನ್ನು ಸಂಪೂರ್ಣ ನಂಬಿದ್ದ ಯುವತಿ, ಹಿಂದೆ ಮುಂದೆ ನೋಡದೆ ಮೊಬೈಲ್ ಮುಂದೆ ಬೆತ್ತಲಾಗಿದ್ದಾಳೆ. ಅದನ್ನು ಆರೋಪಿ ಸ್ಕ್ರೀನ್ ರೇರ್ಕಾಂಡಿಗ್ ಮಾಡಿದ್ದಾನೆ. ಇದಾದ ಬಳಿಕ ತನ್ನ ವರಸೆ ಬದಲಿಸಿದ ಶುಭಂ ಕೌಲೆ, ಯುವತಿಯ ನಗ್ನ ವೀಡಿಯೋದ ಫೋಟೋ ತೆಗೆದು ಎಡಿಟ್ ಮಾಡಿ ತನ್ನ ಸ್ಟೇಟಸ್ಗೆ ಹಾಕಿ ವಿಕೃತಿ ಮೆರೆದಿದ್ದಾನೆ. ಈ ಮೂಲಕ ಯುವತಿಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದ್ದಾನೆ.
ಆರೋಪಿ ಶುಭಂ ಕೌಲೆ ಬಣ್ಣದ ಮಾತುಗಳಿಗೆ ಮರುಳಾಗಿ ಇದೀಗ ಪ್ರಿಯಕರನ ಕರಾಳ ಮುಖ ಅನಾವರಣಗೊಂಡಿದೆ. ಇದೀಗ ನೊಂದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.