ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಕನ್ನಡ ಚಲನಚಿತ್ರೋದ್ಯಮ ಮಂಡಳಿ ಪುನೀತ ನಮನ ಹೆಸರಿನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡ ತಮಿಳು ಹಾಗೂ ತೆಲುಗು ಚಿತ್ರರಂಗದಿಂದ ಹಲವು ಕಲಾವಿದರು ಆಗಮಿಸಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವ ನಿರೀಕ್ಷೆ ಇತ್ತು. ಆದರೆ ಕಾರಣಾಂತರಗಳಿಂದ ಕೆಲವು ಕಲಾವಿದರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ .
ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಇನ್ನು ಕೆಲವು ಕನ್ನಡ ಕಲಾವಿದರುಗಳು ಕೂಡ ಪುನೀತ್ ನುಡಿ ನಮನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ.ಆದರೆ ಪುನೀತ್ ನಮನ ಕಾರ್ಯಕ್ರಮಕ್ಕೆ ಕನ್ನಡ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದು ಇದರ ಜೊತೆಗೆ ರಾಜಕೀಯ ಗಣ್ಯ ವ್ಯಕ್ತಿಗಳು ಕೂಡ ಬಂದಿದ್ದರು. ಕಾರ್ಯಕ್ರಮಕ್ಕೆ ಬಂದ ಎಲ್ಲರೂ ಕಣ್ಣೀರು ಹಾಕಿಯೇ ಮಾತನಾಡಿದ್ದು ಕಾರ್ಯಕ್ರಮ ನಿಜಕ್ಕೂ ಭಾವನಾತ್ಮಕದಿಂದ ತುಂಬಿತ್ತು.
ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿಯೊಬ್ಬರು ಕೂಡ ಪುನೀತ್ ಅವರ ಗುಣಗಳನ್ನು ಕೊಂಡಾಡಿದ್ದು ಬಹುತೇಕ ಎಲ್ಲಾ ಹಿರಿಯ ಕಲಾವಿದರು ನಮ್ಮ ಶ್ರದ್ಧಾಂಜಲಿ ಕಾರ್ಯಗಳಿಗೆ ಅಪ್ಪು ಬರಬೇಕಿತ್ತು, ಆದರೆ ಅಪ್ಪು ಕಾರ್ಯಕ್ಕೆ ನಾವು ಬರುವ ಹಾಗೆ ಆಗಿ ಬಿಟ್ಟಿದೆ ಎಂದು ನೋವಿನ ನುಡಿಗಳನ್ನು ಹೇಳಿದ್ದು ಅಪ್ಪು ನಮನ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದು ಖ್ಯಾತ ನಿರೂಪಕಿ ಅಪರ್ಣ ಅವರು.
ಹೌದು ಇಲ್ಲಿಯವರೆಗೂ ಅಪರ್ಣ ಅವರು ಅದೆಷ್ಟೋ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದು ಆದರೆ ಅಪ್ಪು ನಮನ ಕಾರ್ಯಕ್ರಮ ಮಾತ್ರ ಬೇರೆಯ ರೀತಿಯೇ ಇತ್ತು. ಅಪ್ಪು ಅವರ ಬಗ್ಗೆ ಅಪರ್ಣ ಅವರು ಮನದಾಳದ ಮಾತುಗಳನ್ನಾಡಿದ್ದು ಅಂತಾರಾಷ್ಟ್ರೀಯ ರಾಷ್ಟ್ರೀಯ ಕಾರ್ಯಕ್ರಗಳು ಎಷ್ಟೋ ಆಗಿದೆ. ಆದರೆ ಇಂಥ ಕಾರ್ಯಕ್ರಮಗಳು ಯಾವತ್ತಿಗೂ ಬೇಡ ಅಂತಾನೇ ಅನ್ನಿಸುತ್ತಿರೋದು. ಶತದಿನೋತ್ಸವ ಕನ್ನಡದ ಬಗ್ಗೆ ಇನ್ನೆಷ್ಟು ಕಾರ್ಯಕ್ರಮ ಬೇಕಾದರೂ ಮಾಡೋಣ ಹಾಗೂ ಇಡೀ ದಿನ ಮಾಡೋಣ ಆದರೆ ಇಂಥದ್ದು ಮಾತ್ರ ಇನ್ಯಾವತ್ತು ಬೇಡ. ಇದಕ್ಕೆ ಆಹ್ವಾನ ಬಂದಾಗಿನಿಂದಲು ನನಗೆ ಅನ್ನಿಸುತ್ತಾ ಇರೋದು ಹೀಗೆ.ಎನ್ನುತ್ತಾರೆ ಅಪರ್ಣ.
ಇನ್ನು ಪುನೀತ್ ರಾಜ್ ಕುಮಾರ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಏನು ಅಂತ ಕೇಳಿದಾಗ ಮುಗ್ಧವಾದ ನಗು ಆ ಸರಳತೆ. ಒಂದು ಮಾತಿದೆ Simplicity is Greatness To be Simple is not Easy ಅಂತ. ಸರಳತೆ ಅನ್ನೋದು ದೊಡ್ಡತನ ಆದರೆ ಸರಳವಾಗಿ ಇರೋದನ್ನ ನಮ್ಮದಾಗಿಸಿಕೊಳ್ಳೋದು ಸುಲಭವಲ್ಲ. ಅದನ್ನ ಅತ್ಯಂತ ಸುಲಭವಾಗಿ ತಮ್ಮದಾಗಿಸಿಕೊಂಡಿರುವುದು ದೊಡ್ಮನೆ ಕುಟುಂಬ. ಶಿವಣ್ಣ ಅವರು ರಾಘಣ್ಣ ಅವರು ಪುನೀತ್ ಸರ್ ಎಲ್ಲರು ಎಂದು ಭಾವುಕರಾಗಿ ಹೇಳಿದ್ದಾರೆ ಅಪರ್ಣ ಅವರು.
ಅಪರ್ಣ ಅವರು ಪುನೀತ ನಮನ ಕಾರ್ಯಕ್ರಮದಲ್ಲಿ ಸುಮಾರು ೧೦ ಘಂಟೆಗಳ ಕಾಲ ನಿರೂಪಣೆ ಮಾಡಿದ್ದಾು ಇನ್ನೂ ಅಪರ್ಣ ಅವರ ನಿರೂಪಣೆಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ.ಹೌದು ಕನ್ನಡದಲ್ಲಿ ಸ್ಪಷ್ಟವಾಗಿ ಹಾಗೂ ಅಚ್ಚುಕಟ್ಟಾಗಿ ನಿರೂಪಣೆ ಮಾಡುವ ಕೆಲವೇ ಕೆಲವು ನಿರೂಪಕಿ ಅಪರ್ಣಾ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಬಹುದು.
ಇನ್ನೂ ಈಕೆಗೆ ಸಂಭಾವನೆಯಲ್ಲಿಯೂ ಕೂಡ ಇವರೇ ದುಪ್ಪಟ್ಟೇ ಇದ್ದು ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಅಪರ್ಣ ಅವರೇ ಮೊದಲಿನ ಆಯ್ಕೆಯಾಗಿರುತ್ತಾರೆ. ಹೆಚ್ಚೂ ಕಡಿಮೆ ಐವತ್ತು ರಿಂದ 1ಲಕ್ಷದ ವರೆಗೂ ಕೂಡ ಸಂಭಾವನೆಯನ್ನು ಪಡೆಯುವ ಅಪರ್ಣಾ ಅವರು ಪುನೀತ್ ನಮನ ಕಾರ್ಯಕ್ರಮಕ್ಕೆ ಮಾತ್ರ 1 ರುಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳದೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟು ಕೊನೆಯದಾಗಿ ಪುನೀತ್ ಅವರನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಇನ್ನು ಪುನೀತ ನಮನ ಕಾರ್ಯಕ್ರಮದಲ್ಲಿ ಡಿಬಾಸ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ವಿನೋದ್ ಪ್ರಭಾಕರ್ ಉಮಾಶ್ರೀ, ಕೃಷ್ಣ ಅಜಯ್ ರಾವ್ ದುನಿಯಾ ವಿಜಿ ಯೋಗಿ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಹರಿಪ್ರಿಯಾ ಅನುಶ್ರೀ ರಚಿತಾ ರಾಮ್ ಪ್ರೇಮ್ ರಕ್ಷಿತಾ ಸೇರಿದಂತೆ ಬಹುತೇಕ ಎಲ್ಲಾ ನಟ ನಟಿಯರು ಬಂದು ಅಪ್ಪು ಅವರ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದ್ದಾರೆ.