ಬೆಳ್ತಂಗಡಿ: ಸಹೋದರರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವ ಘಟನೆ ನಿನ್ನೆ ತಡರಾತ್ರಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ನಡೆದಿದೆ. ನೆಲ್ಲಿಗುಡ್ಡೆ ನಿವಾಸಿಯಾದ ಆಟೋ ಚಾಲಕ ಹೈದರ್ ಮತ್ತು ಆತನ ಸಹೋದರ ರಫೀಕ್ ಎಂಬವರು ನಿನ್ನೆ ರಾತ್ರಿ ಆಟೋದಲ್ಲಿ ಹೋಗುತ್ತಿರುವಾಗ, ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸಹೋದರರಿಬ್ಬರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೂವರು ಆರೋಪಿಗಳ ಬಂಧನ: ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಗೇರುಕಟ್ಟೆಯ ಜನತಾ ಕಾಲೋನಿಯ ಬಳಿ ಬಂಧಿಸಿದ್ದಾರೆ. ಆರೋಪಿಗಳನ್ನು ಆಶುತೋಶ್, ಲತನ್ ಹಾಗೂ ಚಂದ್ರಹಾಸ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಪೋಲಿಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಕೇವಲ 2 ಗಂಟೆಯಲ್ಲಿ ಮೂರು ಆರೋಪಿಗಳನ್ನು ಗೇರುಕಟ್ಟೆ ಜನತಾ ಕಾಲೋನಿಯ ಹತ್ತಿರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತತ್ವದ ತಂಡದ ಹೆಡ್ ಕಾನ್ಸ್ಟೇಬಲ್ ಗಳಾದ ವೆಂಕಪ್ಪ, ಇಬ್ರಾಹಿಂ ಗರ್ಡಾಡಿ, ಕಾನ್ಸ್ಟೇಬಲ್ ಗಳಾದ ಬಸವರಾಜ್, ಲತೀಫ್ ಹಾಗೂ ಮತ್ತಿತರರು ಭಾಗವಹಿಸಿದ್ದರು.