ಪುತ್ತೂರು: ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರವರ ಪ್ರೋಚೋದನಾ ಮಾತುಗಳೇ ಕಾರಣ ಎಂದು ಕಳೆದ ಹಲವಾರು ದಿನಗಳಿಂದ ಸಾರ್ವಜನಿಕರೆಡೆಯಲ್ಲಿ ಕೇಳಿ ಬರುತ್ತಿದ್ದು ಇದಕ್ಕೆ ಹೊಸ ತಿರುವು ಎಂಬಂತೆ ಇದೀಗ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಹಿಂಜಾವೇ ಸಂಘಟಕರ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಹಿಂದೂ ಜಾಗರಣ ವೇದಿಕೆ ಸಭೆ ನಡೆಸಿ ಅರುಣ್ ಕುಮಾರ್ ಪುತ್ತಿಲ ಪ್ರೋಚೋದನಾ ಬಾಷಣ ನಡೆಸಿ ವಿದ್ಯಾರ್ಥಿಗಳನ್ನು ಪ್ರೋಚೋದಿಸಿದ್ದು ಎಂದು ಕೇಳಿ ಬಂದಿದ್ದು ಇದರ ವಿರುದ್ಧ ಉಮ್ಮರ್ ಎಂಬವರು ಹಿಂದೂ ಜಾಗರಣ ವೇದಿಕೆ ಸಂಘಟಕರ ವಿರುದ್ಧ ಮತ್ತು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಂತೂ ಕೊಂಬೆಟ್ಟು ಕಾಲೇಜು ಹಲ್ಲೆ ಪ್ರಕರಣ ತೀವ್ರ ತಿರುವು ಪಡೆಯುತ್ತಿದ್ದು ಪ್ರಕರಣದ ವಿರುದ್ಧ ಹಿಂದೂ ಕಾರ್ಯಕರ್ತರು ಕೆರಳಿದ್ದಾರೆ.
ಇನ್ನು ಮುಂದೆ ಯಾವ ರೀತಿ ಈ ಪ್ರಕರಣ ತಿರುವುದು ಪಡೆಯುತ್ತದೆ ಎಂಬುವುದು ಕಾದು ನೋಡಬೇಕಿದೆ.