dtvkannada

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೋಳಂತೂರು ಸುರಿಬೈಲು ಹಾಗೂ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 28-11-2021 ನೇ ಭಾನುವಾರ ಬೋಳಂತೂರು ಎನ್ ಸಿ ರೋಡ್ ಜಂಕ್ಷನ್ ನಲ್ಲಿ ನಡೆಯಿತು.ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೋಳಂತೂರು ಸುರಿಬೈಲು ಘಟಕದ ಅಧ್ಯಕ್ಷರಾದ ಎಸ್ ಎಂ ಬದ್ರುಲ್ ಮುನೀರ್ ವಹಿಸಿಕೊಂಡಿದ್ದರು. ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಹಾಗೂ ಗಣ್ಯರನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೋಳಂತೂರು ಸುರಿಬೈಲು ಘಟಕದ ಪ್ರದಾನ ಕಾರ್ಯದರ್ಶಿಯಾದ ಮುಹಮ್ಮದ್ ಮುಸ್ತಫ ಸ್ವಾಗತಿಸಿದರು.

ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ ಕಲ್ಲಡ್ಕ ಡಿವಿಷನ್ ಇದರ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನ ಮತ್ತು ಯುವ ಸಮುದಾಯ ಆರೋಗ್ಯವಂತ ಸಮಾಜವನ್ನು ಹೇಗೆ ನಿರ್ಮಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಲ್ ಇಹ್ಸಾನ್ ಅಕಾಡೆಮಿ ಶಾಲೆ ಮೂಳೂರು
ಉಡುಪಿ ಜಿಲ್ಲೆ, ಇಲ್ಲಿನ ಶಿಕ್ಷಕರಾದ ಖಲಂದರ್ ಶಾಫಿ ಇವರನ್ನು ಸನ್ಮಾನಿಸಲಾಯಿತು.

ಬೋಳಂತೂರು ಸುರಿಬೈಲು ವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡಿ ಗುರುತಿಸಿಕೊಂಡಿರುವ ಮೆಸ್ಕಾಂ ಗುತ್ತಿಗೆದಾರರಾದ ಸುಲೈಮಾನ್ ಅಪೋಲೋ ಹಾಗೂ
ಅತ್ಯಂತ ಹೆಚ್ಚು ಬಾರಿ ರಕ್ತದಾನ ಮಾಡಿ ಯುವಕರಿಗೆ ಸ್ಪೂರ್ತಿಯಾದ ಹಾರಿಸ್ ಕೊಕ್ಕಪುಣಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿಯಾದ ಶ್ರೀಮತಿ ವೆರೋನಿಕಾ ರೊಡ್ರಿಗಸ್ ಮತ್ತು ಮಂಚಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿಯಾದ ಶ್ರೀಮತಿ ಪ್ರತಿಭಾ ಹಾಗೂ ಬೋಳಂತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ರಾಘವೇಂದ್ರ ಇವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ
ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ತಫ್ಸೀರ್ ಮುಹಮ್ಮದ್ ಬೋಳಂತೂರು,
ಪಾಪ್ಯುಲರ್ ಫ್ರಂಟ್ ಕುಕ್ಕಾಜೆ
ವಲಯ ಅಧ್ಯಕ್ಷರಾದ ನಿಸಾರ್ ಕುಕ್ಕಾಜೆ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೋಳಂತೂರು ಇದರ ಗೌರವಾಧ್ಯಕ್ಷರಾದ ಹನೀಫ್ ಎನ್ ಸಿ ರೋಡ್, ಗ್ರಾಮ ಪಂಚಾಯತಿ ಸದಸ್ಯರಾದ ಶಾಹುಲ್ ಹಮೀದ್, ಬದ್ರಿಯಾ ಜುಮಾ ಮಸೀದಿ ಸುರಿಬೈಲು ಇದರ ಕಾರ್ಯದರ್ಶಿಯಾದ ಎಸ್. ಎಂ ಅಬೂಬಕ್ಕರ್ ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ 108 ರಕ್ತದಾನಿಗಳು ರಕ್ತದಾನ ಮಾಡಿದರು.


By dtv

Leave a Reply

Your email address will not be published. Required fields are marked *

error: Content is protected !!