ಪುತ್ತೂರು: ಪರ್ಲಡ್ಕ ಬೈಪಾಸ್ ನಿವಾಸಿಯಾಗಿರುವ ಪುತ್ತೂರಿನ ರಖಂ ಹಸಿ ಮೀನು ವ್ಯಾಪಾರಿಯಾಗಿರುವ ಹಂಝಾ ಹಾಜಿಯವರ ಪತ್ನಿ ಹಾಗೂ ಹನೀಫಾ ಮತ್ತು ಹಾರೀಸ್ ರವರ ತಾಯಿ ಕುಲ್ಸು ಹಜ್ಜುಮ್ಮ(55) ಇಂದು ರಾತ್ರಿ ಮಂಗಳೂರಿನ ಕೆ.ಯಂ.ಸಿ.ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವರ್ಷದ ಹಿಂದೆ ಇವರ ಮಗ ಪುತ್ತೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಮೃತರು ಪತಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.