';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕೊಂಬೆಟ್ಟು ಕಾಲೇಜ್ ವಿದ್ಯಾರ್ಥಿಗಳ ನಡುವೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಿನೇದಿನೇ ಪುತ್ತೂರಿನಲ್ಲಿ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದು, ಇಂದು ಸಂಜೆ ಪುತ್ತೂರು ಬಸ್ ನಿಲ್ದಾನದಲ್ಲಿ ಎರಡು ಗುಂಪಿನ ಮದ್ಯೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಗುಂಪು ಸೇರಿದ ವಿದ್ಯಾರ್ಥಿಗಳೆಲ್ಲರೂ ಚದುರಿದ್ದು, ಮನೆ ಸೇರಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡಿದ ವಿದ್ಯಾರ್ಥಿ ಗುಂಪಿನ ವಿರುದ್ಧ ಪುತ್ತೂರು ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಎಂ ಹಾರಿಸ್, ಮಹಮ್ಮದ್ ಆದಿಲ್, ಇರ್ಫಾನ್, ಮಹಮ್ಮದ್ ಮುಸ್ತಫ, ಮಹಮ್ನದ್ ಅಶ್ಫಕ್ ನಿತೇಶ್ ವಿರುದ್ಧ ಅ.ಕ್ರ 102/2021 ಕಲಂ ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.