ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡ ರಾತ್ರಿ ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕರು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಸದ್ಯ ಗಾಂಜಾ ಮತ್ತಿನಲ್ಲಿ ಹಾವಳಿ ಕೊಡುತ್ತಿದ್ದ ಪುಂಡರನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೀಸೆಚಿಗುರದ ಹುಡುಗರು ಗಾಂಜಾ ಮತ್ತಿನಲ್ಲಿ ಮಾಡುವ ಪುಂಡಾಟ ಒಂದೆರೆಡಲ್ಲ. ಸದಾ ಗಾಂಜಾ ಮತ್ತಿನಲ್ಲೇ ಇರುತ್ತಿದ್ದ ಅಪ್ರಾಪ್ತ ಹುಡುಗರು ರಾತ್ರಿ ವೇಳೆ ಮನೆಗಳ ಮೇಲೆ ಕಲ್ಲೆಸೆಯುವುದು. ಬೈಕ್‌ಗಳನ್ನು ಅಡ್ಡಗಟ್ಟಿ ರಾಬರಿ ಮಾಡುವುದು. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿ ಪುಂಡಾಟ ಮಾಡುವುದು. ಹಗಲಿನ ವೇಳೆ ವೃದ್ಧರ ಮೇಲೆ ಲಾಂಗ್ ಬೀಸುವುದು. ಜನರ ಜೇಬಿನಲ್ಲಿ ಇದ್ದ ಹಣ ಎಗರಿಸಿ ಪರಾರಿಯಾಗುವುದು. ಬೇಕರಿಯ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡುವುದು. ಹೀಗೆ ಅನೇಕ ಅಪರಾದಗಳನ್ನು ಮಾಡುತ್ತಾ ಬಂದಿದ್ದಾರೆ.
ಸದ್ಯ ಗಾಂಜಾ ಮತ್ತಿನಲ್ಲಿ ಗೂಂಡಾಗಿರಿ ಮಾಡುತ್ತಿದ್ದ ಮೂವರು ಅಪ್ರಾಪ್ತರ ಗ್ಯಾಂಗ್ನನ್ನು ಪುಲಕೇಶಿನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿ ಆರೋಪಿಗಳನ್ನು ಬಾಲಮಂದಿರಕ್ಕೆ ಕಳಿಸಿದ್ದಾರೆ.