ಪುತ್ತೂರು: ಅಂಚೆ ಕಛೇರಿಗೆ ನುಗ್ಗಿದ ಕಳ್ಳರು ಬರಿಗೈನಲ್ಲಿ ತೆರಳಿದ ಘಟನೆ ನಿನ್ನೆ ಬೆಳಗ್ಗೆ ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ ಕಛೇರಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ:
ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾರ ಉಪ ಅಂಚೆ ಪಾಲಕ ಕಛೇರಿಗೆ ಬಂದಾಗ ಕಛೇರಿಯ ಕಿಟಕಿಯ ಸರಳನ್ನು ತುಂಡು ಮಾಡಿರುವುದು ಕಂಡು ಬಂದಿತ್ತು.
ಇದರಿಂದ ಅನುಮಾನಗೊಂಡ ಅವರು ಕಚೇರಿ ಒಳಗೆ ಹೋದಾಗ ಕಛೇರಿಯ ಒಳಗಿದ್ದ ಭದ್ರತಾ ತಿಜೋರಿ ಮುರಿಯಲು ಪ್ರಯತ್ನಿಸಿದ್ದು,
ಅದು ಸಾಧ್ಯವಿಲ್ಲ ಎಂದಾಗ ಬಿಟ್ಟು ಹೋಗಿದ್ದಾರೆ. ಈ ಪ್ರಕರಣವು ಡಿ.9 ರ ರಾತ್ರಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ ಕಛೇರಿಯ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.