ಉಪ್ಪಿನಂಗಡಿ: ಮಹಿಳೆಯೋರ್ವರ ಮೇಲೆ ತಂಡವೊಂದು ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಕಾವಲ್‌ಕಟ್ಟೆ ಮನೆ ನಿವಾಸಿ ಅಬ್ದುರ್ರಹ್ಮಾನ್ ಎಂಬವರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಉಪ್ಪಿನಂಗಡಿಯಲ್ಲಿನ ತನ್ನ ಗುಜುರಿ ವಸ್ತುಗಳ ಅಂಗಡಿಯ ಬಳಿ ತನ್ನ ಪರಿಚಯದ ಶಹನಾಝ್ ಎಂಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗ ತನ್ನ ಪತ್ನಿ ಹಾಗೂ ಚಾಲಕ ಆಫ್ರೀದ್ ಎಂಬವರು ಕೈಗೆ ಸಿಕ್ಕ ವಸ್ತುಗಳಿಂದ ಆಕೆಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಠ ಎಂಬಲ್ಲಿ ಆ ಘಟನೆ ನಡೆದಿದೆ. ಶಹನಾಜ್ ಹಲ್ಲೆಗೊಳಗಾದ ಮಹಿಳೆ. ಶಹನಾಜ್ ಅಬ್ದುಲ್ ರಹಿಮಾನ್ ಎಂಬವರ ಗುಜರಿ ಅಂಗಡಿಗೆ ಬಂದಿದ್ದ ವೇಳೆ ಹಲ್ಲೆ ನಡೆದಿದೆ. ನನ್ನ ಗಂಡನೊಂದಿಗೆ ನಿನಗೇನು ಕೆಲಸ ಎಂದು ಹಸೀನಾ ಮತ್ತು ಆಕೆಯ ಜೊತೆ ಬಂದಿದ್ದ ಇಬ್ಬರು ಶಹನಾಜ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣ ಸಂಬಂಧಿಸಿ ಇದೀಗ ಹೆಂಡತಿಯ ವಿರುದ್ದವೇ ಪತಿ ಅಬ್ದುಲ್ ರಹಿಮಾನ್ ದೂರು ನೀಡಿದ್ದಾರೆ.