ಸವಣೂರು: ಇಲ್ಲಿನ ಬಾಲಸ್ನೇಹಿ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆಗೈದು ಇತ್ತೀಚೆಗೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಮಮತಾ ಭಟ್ ಇವರನ್ನು ಸವಣೂರು ಯೂತ್ ಫ್ರೆಂಡ್ಸ್ ರಿ. ವತಿಯಿಂದ ಇಂದು ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಎಂ ಎಚ್ ವಹಿಸಿದ್ದರು. ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ವಾಗೀಶ್ವರಿ ಪಿ ಸನ್ಮಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ.ಎ, ಬಾಬು ಎನ್ ಕಲಾಯಿ, ಸಾಮಾಜಿಕ ಕಾರ್ಯಕರ್ತ ಶರೀಫ್ ಅಮೈ, ಸವಣೂರು ಯೂತ್ ಫ್ರೆಂಡ್ಸ್ ರಿ. ಅಧ್ಯಕ್ಷ ಯಾಕೂಬ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸವಣೂರು ಯೂತ್ ಫ್ರೆಂಡ್ಸ್ ರಿ. ಸದಸ್ಯರು ಹಾಗೂ ಅಂಗನವಾಡಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಮಮತಾ ದೈಪಿಲ ಹಾಗೂ ಸಹಾಯಕಿ ಗಂಗಾ ಸಹಕರಿಸಿದರು. ಸವಣೂರು ಯೂತ್ ಫ್ರೆಂಡ್ಸ್ ರಿ. ಇದರ ಸಂಘಟನಾ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.