ಪುತ್ತೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಮಹಿಳೆಯನ್ನು ಅಪಹರಣ ಮಾಡಿದ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪ ನಡೆದಿದೆ. ಪ್ರಕರಣ ಸಂಬಂಧಿಸಿ ಇದೀಗ ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೆದಂಬಾಡಿ ಗ್ರಾಮದ ಬೋಳೋಡಿ ಸಮೀಪದ ಗೊಡಂಗೋಣಿ ನಿವಾಸಿಗಳಾದ ಚಂದ್ರಶೇಖರ ಹಾಗೂ ಜಗದೀಶ ಎಂದು ತಿಳಿದು ಬಂದಿದೆ.
ತಿಂಗಳಾಡಿ ನಿವಾಸಿ ಮಹಿಳೆಯನ್ನು ಬಂಧಿತ ಆರೋಪಿಗಳ ಪೈಕಿ ಒಬ್ಬಾತ ಪ್ರೀತಿ ಮಾಡುತ್ತಿದ್ದ. ಆದರೆ ಈ ಮಹಿಳೆಗೆ ಬೇರೊಬ್ಬನ ಮೇಲೆ ಪ್ರೇಮ ಇದ್ದ ಕಾರಣ ಈ ಪ್ರೀತಿಯನ್ನು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಜಗಳ ನಡೆದಿತ್ತು. ನಂತರ ತಿಂಗಳಾಡಿ ಸಮೀಪ ಮಹಿಳೆ ಒಂಟಿಯಾಗಿ ಬರುತ್ತಿದ್ದಾಗ ಆರೋಪಿಗಳು ಅಪಹರಣ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.
ಈ ಬಗ್ಗೆ ಶರತ್ ಕುಮಾರ್ ಎಂಬವರ ನೀಡಿದ ದೂರಿನ ಮೇರೆಗೆ, ಘಟನೆಯ ಮಾಹಿತಿಯನ್ನು ಅರಿತ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಪಡಿಸಿದ್ದಾರೆ.
ಆರೋಪಿಗಳಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ