ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ಉಪ್ಪಿನಂಗಡಿ ನಾಯಕರ ಬಂಧನ ವಿರೋಧಿಸಿ ಪಿ.ಎಫ್.ಐ ಕಾರ್ಯಕರ್ತರು ಪೊಲೀಸ್ ಠಾಣೆಗೆ ಏಕಾ-ಏಕಿ ಮುತ್ತಿಗೆ ಹಾಕಿದ ಘಟನೆ ಉಪ್ಪಿನಂಗಡಿಯಲ್ಲಿ ಇದೀಗ ನಡೆದಿದೆ.
ಪಿ.ಎಫ್.ಐ ನಾಯಕರನ್ನು ಬಂಧನ ಮುಕ್ತ ಗೊಳಿಸುವ ತನಕ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘಟನಾ ಕಾರ್ಯಕರ್ತರು ಹೇಳಿದ್ದಾರೆ.
ಪ್ರತಿಭಟನೆಗೆ ಸಾಥ್ ನೀಡಲು ವಿವಿಧ ಕಡೆಗಳಿಂದ ಹಲವಾರು ಕಾರ್ಯಕರ್ತರು ಬರುವ ನಿರೀಕ್ಷೆಯಿದೆ.