ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಾಗಿದ್ದು ನಿನ್ನೆ 5 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.
ಹೊಸ ವರ್ಷ ಮತ್ತು ಕ್ರಿಸ್‍ಮಸ್ ಹತ್ತಿರದಲ್ಲಿರುವಂತೆ ಕರ್ನಾಟಕದಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 5 ಒಮಿಕ್ರಾನ್ ಕೇಸ್ ಪತ್ತೆಯಾಗಿದೆ. ನಾಲ್ವರು ಪುರುಷರು, ಓರ್ವ ಮಹಿಳೆಗೆ ಒಮಿಕ್ರಾನ್ ದೃಢ ಪಟ್ಟಿದ್ದು ಈ ಮೂಲಕ ಓಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.
https://twitter.com/mla_sudhakar/status/1471489598106726405?s=20
ಐವರಲ್ಲಿ ಓಮಿಕ್ರಾನ್ ಸೋಂಕು ಇರುವುದು ಖಚಿತಗೊಂಡಿದ್ದು, ಈ ಮೊದಲು ದೇಶದಲ್ಲಿ ಮೊದಲ 2 ಓಮಿಕ್ರಾನ್ ಪ್ರಕರಣ ಕೂಡ ಕರ್ನಾಟಕದಲ್ಲೇ ಪತ್ತೆಯಾಗಿತ್ತು. ಇದೀಗ ಒಂದೇ ದಿನ 5 ಪ್ರಕರಣ ಪತ್ತೆ ಆಗುವ ಮೂಲಕ ಮತ್ತಷ್ಟು ಆತಂಕ ಮೂಡಿಸಿದೆ.
ಓಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಕ್ರಿಸ್ ಮಸ್ ಹಾಗೂ ಅದ್ದೂರಿಯಾಗಿ ನಡೆಯುವ ಹೊಸವರ್ಷಾಚರಣೆಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ದೇಶದಲ್ಲಿ ಈಗಾಗಲೇ 87 ಪ್ರಕರಣ ಕಂಡುಬಂದಿದ್ದು ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ತಜ್ಞರು ಶಿಫಾರಸು ಮಾಡಿದ್ದಾರೆ.