ಮಂಗಳೂರು: ಉಪ್ಪಿನಂಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಲಾಠಿಚಾರ್ಜನ್ನು ಖಂಡಿಸಿ ಮಂಗಳೂರಿನಲ್ಲಿ ಇಂದು ಪಿಎಫೈ ಆಯೋಜಿಸಿದ ಎಸ್ಪಿ ಕಛೇರಿ ಚಲೋಗೆ ಜನಸಾಗರ ಹರಿದುಬಂದಿದೆ.

ಕ್ಲಾಕ್ ಟವರ್ ರಸ್ತೆಯಿಂದ ಆರಂಭವಾದ ಪ್ರತಿಭಟನೆಗೆ ಪೊಲೀಸರು ಬ್ಯಾರಿತೇಡ್ ಮೂಲಕ ತಡೆಯೊಡ್ಡಿದರೂ, ಪ್ರತಿಭಟನೆಕಾರರು ರಸ್ತೆಯಲ್ಲೇ ಕುಳಿತು ಎಸ್ಪಿ ಮತ್ತು ಡಿಜಿಪಿ ಬರುವ ವರೆಗೂ ಇಲ್ಲಿಂದ ಕದಲಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧಾರ್ಮಿಕ ವಿದ್ವಾಂಸ ಆತೂರ್ ತಂಙಳ್ ಪ್ರತಿಭಟನೆಗೆ ಬಂದು ಪ್ರತಿಭಾಟನಾಕಾರರೊಂದಿಗೆ ಸೇರಿಕೊಂಡರು.
