ಆಲಪ್ಪುಝ. ಡಿ. 20: ಬಿಜೆಪಿ ರಾಜ್ಯ ನಾಯಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.
ಮೃತರನ್ನು ರಂಜೀತ್ ಶ್ರೀನಿವಾಸ್ (40) ಎಂದು ಗುರುತಿಸಲಾಗಿದೆ. ಇವರು ಬಿಜೆಪಿ ಮೋರ್ಚಾ ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಬಿಜೆಪಿ ರಾಜ್ಯ ಸಮಿತಿಯ ಸದಸ್ಯರಾಗಿದ್ದರು. ದಾಳಿಕೋರರು ಅವರ ಮನೆಗೆ ನುಗ್ಗಿ ಕೊಂದಿದ್ದಾರೆ.
2016ರ ವಿಧಾನಸಭಾ ಚುನಾವಣೆಯಲ್ಲಿ ಆಲಪ್ಪುಳ ಕ್ಷೇತ್ರದಲ್ಲಿ ರಂಜೀತ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರು ಶನಿವಾರ ರಾತ್ರಿ ಹತ್ಯೆಗೀಡಾಗಿದ್ದರು. ಮನ್ನಂಚೇರಿ ಬಳಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಶಾನ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾದರೂ, ಮಧ್ಯರಾತ್ರಿ ಅವರು ಸಾವನ್ನಪ್ಪಿದ್ದರು. ಈ ಕೊಲೆಯನ್ನು ಆರೆಸ್ಸೆಸ್ ಮಾಡಿದೆ ಎಂದು SDPI ಪಕ್ಷವು ಆರೋಪ ಮಾಡಿತ್ತು.
ಈ ಘಟನೆಯ ಬೆನ್ನಲ್ಲೇ ಬಿಜೆಪಿ ರಾಜ್ಯ ಮೋರ್ಚಾ ಕಾರ್ಯದರ್ಶಿ ರಂಜಿತ್ ಅವರ ಮನೆಗೆ ರಾತ್ರೋ ರಾತ್ರಿ ನುಗ್ಗಿ ಐವರು ಸೇರಿ ಮನೆಯಲ್ಲೀಯೆ ಕೊಂದಿದ್ದಾರೆ. ನಿನ್ನೆ ನಡೆದ ಕೊಲೆಗೆ ಪ್ರತಿಕಾರವಾಗಿದೆ ಎಂದು ಪೋಲಿಸರು ಸಂಶಯಪಟ್ಟಿದ್ದು, ಇನ್ನೂ ದೃಢೀಕರಿಸಿಲ್ಲ.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.