dtvkannada

ಬೆಂಗಳೂರು: ಅಲ್ ಉಮ್ಮ ಹೆಲ್ಪ್ ಲೈನ್ ದ.ಕ (ರಿ) ಸಂಸ್ಥೆಯ ಸಾವಿರಾರು ಬಡ ನಿರ್ಗತಿಕ ಕುಟುಂಬಗಳಿಗೆ ನೆರವಾಗುತ್ತ ಬಂದಿದ್ದು, ಹಲವಾರು ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಸಂಧರ್ಭದಲ್ಲಿ ಕ್ರೌಡ್ ಫಂಡಿಗ್ ಮೂಲಕ ನೆರವಾಗಿದೆ, ಅದೇ ರೀತಿ ಬಡ ಕುಟುಂಬಗಳಿಗೆ ರೇಶನ್ ಕಿಟ್, ಬಡ ನಿರ್ಗತಿಕ ಕುಟುಂಬದ ಮದುವೆಗೆ ಸಹಾಯಸ್ತ ನೀಡುತ್ತ ಸಮಾಜ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಲಾಕ್ ಡೌನ್ ಸಂಧರ್ಭದಲ್ಲಿ ಹಲವಾರು ಕುಟುಂಬಗಳಿಗೆ ರೇಶನ್ ಕಿಟ್ ವ್ಯವಸ್ಥೆಯನ್ನು ನೀಡುತ್ತ ಬಂದಿದೆ. ಇದೀಗ ಸಂಸ್ಥೆಯ ಯೋಜನೆಯಲ್ಲಿ ಒಂದಾದ ದೊಡ್ಡ ಮಟ್ಟದ ಆಂಬ್ಯುಲೆನ್ಸ್ ಖರೀದಿ ವಿಚಾರವಾಗಿ ರಾಜ್ಯದ ಹಲವು ಗಣ್ಯರನ್ನು ಸಂಸ್ಥೆಯ ಪದಾಧಿಕಾರಿಗಳು ಭೇಟಿಯಾಗಿದ್ದಾರೆ.ಬೆಂಗಳೂರಿನಲ್ಲಿ ಚಾಮರಾಜ ಪೇಟೆಯ ಶಾಸಕ ಝಮೀರ್ ಅಹ್ಮದ್ ಅವರನ್ನು ಭೇಟಿಯಾಗಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಆಂಬ್ಯುಲೆನ್ಸ್ ಖರೀದಿ ಬಗ್ಗೆ ಮಾತುಕತೆ ನಡೆಸಿದರು. ಝಮೀರ್ ಅಹ್ಮದ್ ರವರು ಸಂಸ್ಥೆಯ ಫೈಲ್ ವೀಕ್ಷಿಸಿ ಸೇವೆಯನ್ನು ಶ್ಲಾಘಿಸಿ ಆಂಬ್ಯುಲೆನ್ಸ್ ಖರೀದಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬೆಂಗಳೂರಿನ ಶಾಸಕರ ಭವನದಲ್ಲಿ ನ್ಯಾಯಾಧೀಶ ಜಗದೀಶ್ ಸರ್ ಅವರ ಸಮ್ಮುಖದಲ್ಲಿ ಸಂವಿಧಾನ ಓದು ಎಂಬ ಗ್ರಂಥವನ್ನು ಅಲ್ ಉಮ್ಮ ಹೆಲ್ಪ್ ಲೈನ್ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಶಿವಾಜಿ ನಗರ ಶಾಸಕ ರಿಜ್ವಾನ್ ಹರ್ಷದ್ ರವರನ್ನು ಬೇಟಿ ಮಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಚರ್ಚಿಸಿ ನಂತರ ಅಲ್ ಉಮ್ಮ ತಂಡಕ್ಕೆ ಸಾಥ್ ನೀಡಿ ಭರವಸೆಯ ಬೆಳಕನ್ನು ನೀಡಿದರು.

ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕರಾಗಿರುವ ತಲ್ಹತ್ ತಂಙಲ್ ಪೈಝಲ್ ನಗರ ಇವರನ್ನು ಬೇಟಿ ಮಾಡಿ ಇವರ ನೇತೃತ್ವದಲ್ಲಿ ಹಲವಾರು ನಾಯಕರು ಹಾಗೂ ದಾನಿಗಳ ಸಮ್ಮುಖದಲ್ಲಿ ಆಂಬ್ಯುಲೆನ್ಸ್ ಖರೀದಿಗೆ ಆರ್ಥಿಕವಾಗಿ ಸಹಾಯಸ್ತ ನೀಡುವ ಭರವಸೆ ನೀಡಿದ್ದಾರೆ. ವೈಯಕ್ತಿಕವಾಗಿ ತಲ್ಹತ್ ರವರ ಸಾರಥ್ಯದಲ್ಲಿ ಪ್ರಸಾದ್ ರವರು 1.50 ಲಕ್ಷ ಹಣವನ್ನು ಆಂಬ್ಯುಲೆನ್ಸ್ ಖರೀದಿಗಾಗಿ ನೀಡುವ ಭರವಸೆ ನೀಡಿದ್ದಾರೆ.

ಇತಿಹಾಸ ಪ್ರಸಿದ್ಧ ದರ್ಗಾ ಶರೀಫ್ ಹಝ್ರತ್ ತವಕ್ಕಲ್ ಮಸ್ತಾನ್ ಕೋಟನ್ ಪೇಟೆ‌ಯಲ್ಲಿ ತೀರ ಬಡತನದಲ್ಲಿ ಜೀವಿಸುತ್ತಿರುವ 150 ಜನರಿಗೆ ಮದುವೆ ಉಡುಪುಗಳು ಹಾಗೂ ಬಟ್ಟೆ ಬರೆಗಳನ್ನು ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ (ರಿ) ವತಿಯಿಂದ ನೀಡಲಾಯಿತು.


ಕರ್ನಾಟಕ ಸರ್ಕಾರ ವಕ್ಫ್ ಬೋರ್ಡ್ ಅಧ್ಯಕ್ಷರಾಗಿರುವ ಮೌಲಾನಾ ಎನ್.ಕೆ ಶಾಪಿ ಸಹದಿಯವರಿಗೆ ಅಲ್ ಉಮ್ಮ ತಂಡದ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು

ಮುಂದಿನ ದಿನಗಳಲ್ಲಿ ಇನ್ನೂ ಹಲವು ಗಣ್ಯ ನೇತಾರರನ್ನು ಬೇಟಿಯಾಗಿ ಇನ್ನಷ್ಟು ಕಾರ್ಯಾಚರಣೆಯಲ್ಲಿ ಮುಂದಾಲತ್ವ ವಹಿಸಿಕೊಂಡಿದೆ. ತಮ್ಮ ಸಹಾಯ ಸಹಕಾರ ಅಲ್ ಉಮ್ಮಾ ತಂಡಕ್ಕೆ ಸದಾ ಇರಲಿ ಎಂದು ಮಾಧ್ಯಮಕ್ಕೆ ಕಾರ್ಯನಿರ್ವಾಹಕರು ಮನವಿ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!