ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಮ್ಮನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಬಾಲಕಿ ಮಾತ್ರ ಪ್ರಾಣಾಪಾಯದಿಂದ ಪಾರಗಿದ್ದಾಳೆ.

ಸಿದ್ದಮ್ಮ(55), ಸುಮಿತ್ರಾ(30), ಹನುಮಂತ ರಾಜು(35) ಮೃತ ದುರ್ದೈವಿಗಳು.
ಹನುಮಂತ, ಸುಮಿತ್ರಾ ದಂಪತಿ ಪುತ್ರಿ ಕೀರ್ತನಾ ಸ್ಥಿತಿ ಗಂಭೀರವಾಗಿದೆ. ಕೀರ್ತನಾಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕುಡಿದು ಗಲಾಟೆ ಮಾಡಿಕೊಂಡು ಮಾತಿಗೆ ಮಾತು ಬೆಳೆದು ಆತ್ಮಹತ್ಯೆಗೆ ಕುಟುಂಬ ಯತ್ನಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಮೊದಲಿಗೆ ಒಟ್ಟು ಐವರು ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಮೃತ ಸುಮಿತ್ರಾಳ ಹತ್ತು ವರ್ಷದ ಮಗಳು ಚಂದನಾ(10) ಬಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ಪಡೆದ ಗ್ರಾಮಸ್ಥರು ಕೀರ್ತನಾ ರಕ್ಷಣೆ ಮಾಡಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.