dtvkannada

ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಟೀಮ್ ಮೋಟೊರೇಸಿಂಗ್ ಪಂಡಿತ್ ಹೌಸ್ ಮತ್ತು ತೊಕ್ಕೊಟ್ಟು ಟೂರಿಸ್ಟ್ ವಾಹನ ಚಾಲಕ ಮತ್ತು ಮಾಲಕರ ಸಂಘ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 22 ಡಿಸೆಂಬರ್ 2021 ನೇ ಬುಧವಾರದಂದು ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯಿರುವ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರಶಾಂತ್ ಆಳ್ವಾ, ಅಧ್ಯಕ್ಷರು ಟೂರಿಸ್ಟ್ ಚಾಲಕ ಮಾಲಕರ ಸಂಘ ತೊಕ್ಕೊಟ್ಟು, ಪ್ರೇಮ್ ಜೀತ್ ಪ್ರಧಾನ ಕಾರ್ಯದರ್ಶಿ ಟೂರಿಸ್ಟ್ ಚಾಲಕ ಮಾಲಕರ ಸಂಘ, ಸುಧಾಕರ್ ಕೋಶಾಧಿಕಾರಿ ಟೂರಿಸ್ಟ್ ಚಾಲಕ ಮಾಲಕರ ಸಂಘ, ಅಬ್ದುಲ್ ಸಲೀಂ ಸದಸ್ಯರು ಟೂರಿಸ್ಟ್ ಚಾಲಕ ಮಾಲಕರ ಸಂಘ, ಚಾರ್ಜ್ ಡಿಸಿಲ್ವಾ ಸದಸ್ಯರು ಟೂರಿಸ್ಟ್ ಚಾಲಕ ಮಾಲಕರ ಸಂಘ, ಟೀಮ್ ಮೋಟೋರೇಸಿಂಗ್ ಸ್ಥಾಪಕರಾದ ಅಬ್ದುಲ್ ರಹಿಮಾನ್, ಪ್ರಶಾಂತ್ ಪಂಡಿತ್ ಹೌಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕರಾದ ಮುಜ್ಜ ಮೆರ್ಸಿ ಮತ್ತು ಶಾಫಿ ಕಿನ್ಯ ಉಪಸ್ಥಿತರಿದ್ದರು.ಯಶಸ್ವಿ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ 50 ಜನಸ್ನೇಹಿ ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡುವುದರ ಮೂಲಕ ಜೀವದಾನಿಗಳಾದರು.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಊರಿನ ಸರ್ವ ಸಹೃದಯೀ ದಾನಿಗಳಿಗೂ,ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ, ಮತ್ತು ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಸಂಘ ಸಂಸ್ಥೆಗಳ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಪರವಾಗಿ ಕೃತಜ್ಞತೆಗಳು ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ಸಿರಾಜುದ್ದೀನ್ ಪರ್ಲಡ್ಕ, ಸಮೀರ್ ಸೀಕೋ, ಜುನೈದ್ ಬಂಟ್ವಾಳ, ಫೈಝಲ್ ವಳಚ್ಚಿಲ್, ದೀಪಕ್ ದೇರಳಕಟ್ಟೆ, ರಿಯಾಝ್ ಕಣ್ಣೂರು, ಇಮ್ರಾನ್ ಅಡ್ಡೂರು, ಶಕೀಲ್ ಉಳ್ಳಾಲ, ಇಮ್ರಾನ್ ಬೈತಾರ್, ನಾಚಿ ಆರ್ ಬಿ, ಸಾದಿಕ್ ಪಾವೂರು ಹಾಗೂ ಯೇನಪೋಯ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಮ್ರಾನ್ ಮದಕ ನಿರೂಪಿಸಿದರು. ಉಳ್ಳಾಲ ಪುರಸಭೆಯ ಮಾಜಿ ಕೌನ್ಸಿಲರ್ ಬಗ್ವಾನ್ ದಾಸ್ ಸ್ವಾಗತಿಸಿ ವಂದಿಸಿದರು.


By dtv

Leave a Reply

Your email address will not be published. Required fields are marked *

error: Content is protected !!