ಕೊಂತೂರು: ಎಸ್ ಕೆ ಎಸ್ ಎಸ್ ಎಫ್ ನೆಕ್ಕರೆ ಆಲಂಕಾರು ಶಾಖೆ ಇದರ ಮಹಾ ಸಭೆಯು ದಿನಾಂಕ 19-12-2021 ಆದಿತ್ಯ ವಾರ ಶಾಖಾಧ್ಯಕ್ಷರಾದ ಕೆ.ಎನ್.ಆಝಾದ್ ಇವರ ಅಧ್ಯಕ್ಷತೆಯಲ್ಲಿ ಮಸ್ಜಿದುಲ್ ಬಾರಿ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.

ಪ್ರಸ್ತುತ ಸಭೆಯಲ್ಲಿ ಚುನಾವಣಾ ಅಧಿಕಾರಿ ಬಹು:ಉಬೈದುಲ್ಲಾ ಮುಸ್ಲಿಯಾರ್ ಕೋಡಿಂಬಾಲ ದುಃಆ ಹಾಗು ನಸೀಹತ್ ನೆರವೇರಿಸಿದರು.
ಎಸ್ಕೆ ಎಸ್ ಎಸ್ ಎಫ್. ಪ್ರದಾನ ಕಾರ್ಯದರ್ಶಿ ಎಸ್ ಯಂ ಅಬ್ದುಲ್ ರಝ್ಝಾಕ್ ಗತಕಾಲ ವರದಿ ಮಂಡಿಸಿದರು.
ಚುನಾವಣಾ ಅಧಿಕಾರಿಯಾಗಿ ಉಬೈದುಲ್ಲಾ ಮುಸ್ಲಿಯಾರ್ ಹಾಗು ವೀಕ್ಷಕರಾಗಿ ಅಬ್ದುಲ್ ರಹ್ಮಾನ್ ಕಡಬ ಆಗಮಿಸಿದ್ದರು. ನಂತರ ಇವರ ನೇತೃತ್ವದಲ್ಲಿ 2022/24 ನೇ ಸಾಲಿನ ನೂತನ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು.
ಅಧ್ಯಕ್ಷರಾಗಿ ಎಸ್ ಯಂ ಅಬ್ದುಲ್ ರಝ್ಝಾಕ್ ನೆಕ್ಕರೆ, ಉಪಾಧ್ಯಕ್ಷರಾಗಿ ಲತೀಫ್ ಎಂ ಎಸ್. ಪ್ರ ಕಾರ್ಯದರ್ಶಿಯಾಗಿ ಇರ್ಶಾದ್ ನೆಕ್ಕರೆ, ಜೊತೆ ಕಾರ್ಯದರ್ಶಿಯಾಗಿ ಶಾಹಿಲ್ ತಾಜ್, ಕೋಶಾದಿಕಾರಿಯಾಗಿ ಹನೀಫ್ ನೆಕ್ಕರೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಉಮರ್ ನೆಕ್ಕರೆ, ಇಬಾದ್ ಕನ್ವೀನರ್ ಆಗಿ ಆಶಿಕ್ ನಡುಗುಡ್ಡೆ, ವಿಖಾಯ ಕನ್ವೀನರ್ ಆಗಿ ಇಲ್ಯಾಸ್ ನೆಕ್ಕರೆ, ಸಹಚಾರಿ ಕನ್ವೀನರ್ ಆಗಿ ತ್ವಾಯಿಫ್ ನೆಕ್ಕರೆ, ಟ್ರೆಂಡ್ ಕನ್ವೀನರ್ ಆಗಿ ಶಾಕಿರ್ ಎಂ ಎಸ್, ಸರ್ಗಾಲಯ ಕನ್ವೀನರ್ ಆಗಿ ಮೊಯ್ದು ಎಂ ಎಸ್, ತ್ವಲಬ ಕನ್ವೀನರ್:ನಜ್ಮುದ್ದೀನ್ ನಡುಗುಡ್ಡೆ ಇರ್ಫಾನಿ, ಕ್ಲಷ್ಟರ್ ಕೌನ್ಸಿಲರ್ ಆಗಿ ಕೆ ಎನ್ ಆಝಾದ್ ನೆಕ್ಕರೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಿಯಾಝ್, ಫಾರೂಖ್, ಆಸಿಫ್, ಆಸಿಲ್, ನವಾಝ್ ಹಾಗೂ ಅನೀಸ್ ಕೆ ಎಸ್ ಎಂಬವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಎಸ್ಕೆ ಎಸ್ ಎಸ್ ಎಫ್ ವಲಯ ಅಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ, ಕೋಶಾದಿಕಾರಿ ಆದಂ ಅಡ್ಕಾಡಿ, ನೆಕ್ಕರೆ ಜಮಾಅತ್ ಅಧ್ಯಕ್ಷರಾದ ಖಾದರ್ ನೆಕ್ಕರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ ಯಂ ರಝ್ಝಾಕ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಇರ್ಶಾದ್ ಧನ್ಯವಾದ ಸಮರ್ಪಿಸಿದರು.