dtvkannada

'; } else { echo "Sorry! You are Blocked from seeing the Ads"; } ?>

ಹೊಸದಿಲ್ಲಿ:ಮೊದ ಮೊದಲು ಕೊರೋನ ಪ್ರಕರಣಗಳು ಹೇಗೆ ಹೆಚ್ಚುತ್ತಿದ್ದವೋ ಅದೇ ರೀತಿ ಈಗ ದೇಶದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಗುರುವಾರ 300ರ ಗಡಿ ದಾಟಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆ ಸಂಖ್ಯೆಯ ಅಂದರೆ 84 ಪ್ರಕರಣಗಳು ವರದಿಯಾಗಿವೆ.



ಮಂಗಳವಾರ ದಾಖಲಾದ 44 ಹೊಸ ಪ್ರಕರಣಗಳಿಗಿಂತ 40ರಷ್ಟು ಅಧಿಕ. ದೇಶದಲ್ಲಿ ಪ್ರಸ್ತುತ ಒಟ್ಟು 341 ಒಮೈಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ತಮಿಳುನಾಡಿನಲ್ಲಿ ಗರಿಷ್ಠ ಅಂದರೆ 33 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ 23 ಹಾಗೂ ಕರ್ನಾಟಕದಲ್ಲಿ 12 ಸೋಂಕು ಪತ್ತೆಯಾಗಿವೆ. ದೆಹಲಿ ಹಾಗೂ ಗುಜರಾತ್‌ನಲ್ಲಿ ತಲಾ ಏಳು ಹಾಗೂ ಒಡಿಶಾದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಒಟ್ಟು 88 ಪ್ರಕರಣಗಳು ದಾಖಲಾಗಿದ್ದು, ದೆಹಲಿ (64), ತೆಲಂಗಾಣ (38) ಮೊದಲ ಮೂರು ಸ್ಥಾನಗಳಲ್ಲಿವೆ. ಬುಧವಾರ ವರೆಗೆ ಕೇವಲ ಒಂದು ಪ್ರಕರಣ ಬೆಳಕಿಗೆ ಬಂದಿದ್ದ ತಮಿಳುನಾಡಿನಲ್ಲಿ ವೇಗವಾಗಿ ಹರಡುವ ಈ ಪ್ರಬೇಧದ ಸೋಂಕಿತರ ಸಂಖ್ಯೆ 34ಕ್ಕೆ ಏರಿದ್ದು, ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರದಲ್ಲಿ 23 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 17 ಮಂದಿಗೆ ಯಾವುದೇ ರೋಗಲಕ್ಷಣ ಇಲ್ಲ ಹಾಗೂ ಉಳಿದ ಆರು ಮಂದಿಯಲ್ಲಿ ಅಲ್ಪ ಪ್ರಮಾಣದ ಲಕ್ಷಣಗಳು ಕಂಡುಬಂದಿವೆ. ನಾಲ್ವರು ಹೊಸ ಸೋಂಕಿತರು 18 ವರ್ಷಕ್ಕಿಂತ ಕೆಳಗಿನವರು. ಹೊಸ ಪ್ರಕರಣಗಳ ಪೈಕಿ 13 ಪುಣೆಯಿಂದ, ಐದು ಮುಂಬೈ ಹಾಗೂ 2 ಉಸ್ಮನಾಬಾದ್‌ ನಿಂದ, ಥಾಣೆ, ನಾಗ್ಪುರ ಹಾಗೂ ಮಿರಾ ಭಯಂದೆರ್‌ ನಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ 12 ಹೊಸ ಪ್ರಕರಣಗಳೊಂದಿಗೆ ಒಟ್ಟು ಸಂಖ್ಯೆ 31ಕ್ಕೇರಿದೆ. 10 ಮಂದಿ ಬೆಂಗಳೂರು ಹಾಗೂ ತಲಾ ಒಬ್ಬರು ದಕ್ಷಿಣ ಕನ್ನಡ ಹಾಗೂ ಮೈಸೂರಿನವರು. ಬೆಂಗಳೂರು ಪ್ರಕರಣದಲ್ಲಿ ಬ್ರಿಟನ್‌ನಿಂದ ಆಗಮಿಸಿದ 26 ವರ್ಷದ ಮಹಿಳೆಯ ಜತೆ ನಿಕಟ ಸಂಪರ್ಕ ಹೊಂದಿದ್ದ (ಪ್ರಾಥಮಿಕ ಸಂಪರ್ಕ) ಮೂರು ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!