';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು : ಕಟೀಲು -ಕಿನ್ನಿಗೋಳಿ ಸಮೀಪದ ಗುತ್ತಕಾಡುವಿನ ತಾಳಿಪಾಡಿಯಲ್ಲಿ ಗ್ರಾಮಸ್ಥರ ಭಯ ಭೀತಿಗೊಳಿಸಿದ್ದ ಚಿರತೆ ಕೊನೆಗೂ ಬೋನಿನೊಳಗೆ ಅರಣ್ಯ ಇಲಾಖೆಯ ತಂಡದ ಸಾಹಸದಿಂದ ಸೆರೆಯಾಗಿದೆ.
ಕಿನ್ನಿಗೋಳಿಯ ಅಸುಪಾಸಿನಲ್ಲಿ ಹಾಡು ಹಗಲೇ ಚಿರತೆ ಓಡಾಡುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯಪ್ರವರ್ತರಾದ ಅರಣ್ಯಾಧಿಕಾರಿಗಳು ಕಿನ್ನಿಗೋಳಿಯ ತಾಳಿಪಾಡಿಯಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿದು ನಾಗರಿಕರಿಗೆ ನಿಟ್ಟುಸಿರು ಬಿಡುವಂತಾಗಿದ್ದು ಈಗ ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಶೀಘ್ರ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳ ನಡೆಗೆ ಕಿನ್ನಿಗೋಳಿ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.