dtvkannada

ಮಂಗಳೂರು: ಕ್ರೈಸ್ತ ಯುವತಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಡ್ರಗ್ಸ್ ಚಟ ಹಿಡಿಸಿ, ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬಗ್ಗೆ ಮಂಗಳೂರಿನಲ್ಲಿ ನಡೆದಿದೆ.



ಕ್ರೈಸ್ತ ಸಮುದಾಯದ ಸಂತ್ರಸ್ತ ಯುವತಿಯ ರಕ್ಷಣೆಗಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಮೊರೆ ಹೋಗಿದ್ದಾರೆಂದು ತಿಳಿದು ಬಂದಿದೆ.

ಮಂಗಳೂರು ನಗರದ ಕೃಷ್ಣಾಪುರ ನಿವಾಸಿ ಡ್ರಗ್ ಪೆಡ್ಲರ್ ಸಿದ್ದಿಕ್ ಎಂಬಾತ ಕ್ರೈಸ್ತ ಯುವತಿಯನ್ನು ಮಾತಲ್ಲೆ ಮರುಳಾಗಿಸುತ್ತಿದ್ದ ಈತನ ಮಾತನ್ನು ನಂಬಿದ ಯುವತಿ ಕೊನೆಗೆ ಡ್ರಗ್ಸ್‌ಗೆ ಬಲಿಯಾಗಿದ್ದಾಳೆ.

ಹಲವಾರು ದಿನಗಳ ಕಾಲ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಸಿದ್ದಿಕ್, ಯುವತಿಯನ್ನು ಅಮಲಿನಲ್ಲಿ ತೇಲಿಸಿ ಆತ ಹಾಗೂ ಆತನ ನಾಲ್ವರು ಗೆಳೆಯರು ಸೇರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಯುವತಿಯ ತಾಯಿ ಆರೋಪಿಸಿದ್ದಾರೆ.



ಈ ಬಗ್ಗೆ ಉರ್ವ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ತನಕ ನ್ಯಾಯ ಸಿಗದಿದ್ದ ಕಾರಣ ಕೊನೆಗೆ‌ ಯುವತಿಯ ತಾಯಿ ವಿ.ಹಿಂ.ಪ, ಭಜರಂಗದಳದ ಮೊರೆ ಹೋಗಿದ್ದು ಮಗಳನ್ನು ರಕ್ಷಿಸಿಕೊಡಲು ಅಂಗಲಾಚಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯನ್ನು ವಿ.ಹಿಂ.ಪ, ಭಜರಂಗದಳ ತೀವ್ರವಾಗಿ ಖಂಡಿಸಿದೆ.ಆರೋಪಿಯು ಈ ಮುಂದೆಯೂ ಡ್ರಗ್ ಮಾಫಿಯಾದಲ್ಲಿ ಈತನ ಹೆಸರು ಕೇಳಿಬರುತ್ತಿತ್ತು ಎನ್ನಲಾಗಿದೆ.

ಈಗಾಗಲೇ ಈತ ನಾಲ್ಕು ಮದುವೆಯಾಗಿರುವ ಮಾಹಿತಿ ಇದೆ ಎನ್ನಲಾಗಿದ್ದು ಯುವತಿ ಅಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ಮುಗಿಸಿದ್ದು, ಡ್ರಗ್ಸ್ ಚಟ ಹತ್ತಿಸಿಕೊಂಡಿದ್ದಳು.

ಆನಂತರ ಡ್ರಗ್ಸ್ ಇಲ್ಲದೆ ಬದುಕುವುದೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳು.

ನಡುರಾತ್ರಿಯಲ್ಲಿ ಬೈಕಿನಲ್ಲಿ ಈ ಯುವಕರು ಯುವತಿಯನ್ನು ಕರೆದೊಯ್ಯುತ್ತಿದ್ದು ಆ ಬಳಿಕ ಹಲವು ದಿನಗಳ ಕಾಲ ಇಟ್ಟುಕೊಳ್ಳುತ್ತಿದ್ದರು ಎಂದು ಯುವತಿಯ ತಾಯಿ ದೂರಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!