ಸುಳ್ಯ: ಹರಿಯುತ್ತಿದ್ದ ತೋಡಿನ ಬಳಿ ಅಪರಿಚಿತ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಸೋಣಂಗೇರಿ ಸಮೀಪ ಜಿಬಡ್ಕದಲ್ಲಿ ಪಡೆದಿದೆ.

ಸುಳ್ಯದ ಜಿಬಡ್ಕ ನೀರಿನ ತೋಡಿನ ಬಳಿ ಅಪರಿಚಿತ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಕಂಡ ಕೂಡಲೇ ಸ್ಥಳೀಯ ನಿವಾಸಿಗಳು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.