ಮುಲ್ಕಿ: ಬೈಕ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿ ಆಟೋ ಚಾಲಕ ಹಾಗು ಬೈಕ್ ಸವಾರ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
![](http://dtvkannada.in/wp-content/uploads/2022/01/IMG-20220101-WA0029.jpg)
ಐಕಳ ನೆಲ್ಲಿಗುಡ್ಡೆ ನಿವಾಸಿ ಬೈಕ್ ಸವಾರ ಪ್ರೇಮ್ ಸಲ್ದಾನ ಹಾಗು ಆಟೋ ಚಾಲಕ ಗುತ್ತಕಾಡು ನಿವಾಸಿ ಅಸೀಮ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿ, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![](http://dtvkannada.in/wp-content/uploads/2022/01/IMG-20220101-WA0030.jpg)
ಕಿನ್ನಿಗೋಳಿ ಪೆಟ್ರೋಲ್ ಬಂಕ್ ಬಳಿಯಿಂದ ಪೆಟ್ರೋಲ್ ಹಾಕಿ ಹೆದ್ದಾರಿ ಕಡೆ ಕ್ರಾಸ್ ಆದ ಬೈಕ್ ಗೆ ಮೂರು ಕಾವೇರಿ ಯಿಂದ ಕಿನ್ನಿಗೋಳಿ ಕಡೆ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರ ದೃಶ್ಯ ಸ್ಥಳೀಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.