ಸ್ಕಾರ್ಪ್ ಧರಿಸಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಕೇಸರಿ ಶಾಲು ಧರಿಸಿಕೊಂಡು ಬಂದ ಹಿಂದೂ ವಿಧ್ಯಾರ್ಥಿಗಳು!
ಮತ್ತೆ ಕಾಲೇಜಿನಲ್ಲಿ ಭುಗಿಲೆದ್ದ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ; ಎರಡು ಕಡೆಯವರನ್ನು ಸಮಾನವಾಗಿ ಸ್ವಿಕರಿಸುತ್ತಾರಾ ಶಾಲಾ ಆಡಳಿತ ಮಂಡಳಿ !?
ಚಿಕ್ಕಮಂಗಳೂರು: ಕಾಲೇಜಿನ ಒಳಗೆ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕೊಪ್ಪ ತಾಲೂಕಿನ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ಘಟನೆ ಸೋಮವಾರ ನಡೆದಿದೆ.

ಇದೇ ಕಾಲೇಜಿನಲ್ಲಿ ಮೂರು ವರ್ಷಗಳ ಹಿಂದೆಯೂ ಸ್ಕಾರ್ಫ್ ವಿವಾದವಾಗಿತ್ತು. ಆಗ ಪೋಷಕರು, ಪ್ರಾಂಶುಪಾಲರು ವಿವಾದವನ್ನು ತಿಳಿಗೊಳಿಸಿದ್ದರು. ಆದರೆ ಇದೀಗ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ ಎನ್ನುವುದನ್ನು ವಿರೋಧಿಸಿ, ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
