';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹಾಸನ: ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಪತ್ನಿ ಅರೆಸ್ಟ್ ಆಗಿದ್ದಾಳೆ. ಯಸಳೂರು ಪೊಲೀಸರು ಪತ್ನಿ ಶ್ರುತಿ ಮತ್ತು ಆಕೆಯ ಪ್ರಿಯಕರನನ್ನ ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮರಡಿಕೆರೆ ಗ್ರಾಮದ ಬಳಿ ಡಿ.26ರಂದು ಸಂತೋಷ್(29) ಶವ ಸಿಕ್ಕಿತ್ತು. ಕೆಲಸ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದ ಸಂತೋಷ್ ಅಡ್ಡಗಟ್ಟಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಅಪಘಾತ ಎಂದು ಪತ್ನಿ ಬಿಂಬಿಸಲು ಯತ್ನಿಸಿದ್ದಾಳೆ.
ಕೊಡಗು ಜಿಲ್ಲೆಯ ಸೋಮವಾಪೇಟೆ ತಾಲೂಕಿ ಶನಿವಾರಸಂತೆ ಸಂತೋಷ್, ಶ್ರುತಿ ಪ್ರೀತಿಸಿ ವಿವಾಹವಾಗಿದ್ದರು. 6 ವರ್ಷಗಳ ನಂತರ ಚಂದ್ರಶೇಖರನ ಜೊತೆ ಶ್ರುತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅನೈತಿಕ ಸಂಬಂಧಕ್ಕೆ ಗಂಡ ಅಡ್ಡ ಬರುತ್ತಿದ್ದಾನೆಂದು ಹೆಂಡತಿ ಕೊಲೆ ಮಾಡಿಸಿದ್ದಾಳೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಶ್ರುತಿ, ಪ್ರಿಯಕರ ಚಂದ್ರಶೇಖರ, ಸ್ನೇಹಿತ ಧರ್ಮರಾಜ್ ಬಂಧನಕ್ಕೊಳಗಾಗಿದ್ದಾರೆ.