';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಉದ್ದೇಶದಿಂದಲೇ ವೀಕೆಂಡ್ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಪ್ರತಿಭಟನೆಯನ್ನು ನಿಲ್ಲಿಸಲು ಸೆಕ್ಷನ್ ಹೇರಲು ಮುಂದಾಗಿದೆ, ಒಂದುವೇಳೆ ಸೆಕ್ಷನ್ ಹೇರಿದರೆ ಐದು ಮಂದಿಗಿಂತ ಹೆಚ್ಚು ಜನ ಸೇರಬಾರದು ಎಂದಲ್ಲವೇ ನಿಯಮ? ಹಾಗಾದರೆ ನಾನು, ಡಿಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ದೃವನಾರಾಯಣ್ ಸೇರಿ ನಾಲ್ಕು ಮಂದಿ ನಡೆದುಕೊಂಡು ಹೋಗುತ್ತೇವೆ, ಆಗಲೂ ತಡೆಯುತ್ತೀರಾ? ಬಲಪ್ರಯೋಗ ಮಾಡಿದರೆ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಹಾಗಾಗುವುದಿಲ್ಲವೇ ಎಂದು ಸರಕಾರಕ್ಕೆ ನೇರವಾಗಿ ಪ್ರಶ್ನಿಸಿದ್ದಾರೆ.